ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಮೂರು ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಈ ನಡುವೆ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಟೀಕಿಸಿರುವ ರಾಜ್ಯ ಬಿಜೆಪಿ, ರೌಡಿ ಹಿನ್ನೆಲೆಯುಳ್ಳವರಿಗೂ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದು ಕಿಡಿಕಾರಿದೆ.
ಎಂಥ ಘನ ಹಿನ್ನೆಲೆಯುಳ್ಳ ವ್ಯಕ್ತಿಗೆ ಕಾಂಗ್ರೆಸ್ ವಿಧಾನಪರಿಷತ್ ಚುನಾವಣಾ ಟಿಕೆಟ್ ನೀಡಿದೆ. ಅಸಭ್ಯ ವರ್ತನೆಗಾಗಿ ಸಿಸಿಬಿ ಕಚೇರಿಯಲ್ಲಿ ಕಂಬಿ ಎಣಿಸಿದ ವ್ಯಕ್ತಿಯನ್ನು ಹಿರಿಯರ ಸದನದ ಸದಸ್ಯನಾಗಿಸುವುದಕ್ಕೆ ಭ್ರಷ್ಟಾಧ್ಯಕ್ಷ ಡಿಕೆಶಿ ಮುಂದಾಗಿದ್ದಾರೆ. ಕೈ ಅಭ್ಯರ್ಥಿಯ ರೌಡಿ ಹಿನ್ನೆಲೆ ಡಿಕೆಶಿಯನ್ನು ಆಕರ್ಷಿಸಿರಬಹುದೇ? ಎಂದು ವ್ಯಂಗ್ಯವಾಡಿದೆ.
ಜಿಯೋದ ಅಗ್ಗದ ಪ್ಲಾನ್ ನಲ್ಲಿ ಸಿಗ್ತಿದೆ ಭರ್ಜರಿ ಡೇಟಾ…! ಜೊತೆಗೆ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಚಂದಾದಾರಿಕೆ
ಎಸ್ ಆರ್ ಪಾಟೀಲ್ ಅವರಂತಹ ಹಿರಿಯರಿಗೆ ಸಭ್ಯರಿಗೆ ಕೈ ಕೊಟ್ಟ ಕಾಂಗ್ರೆಸ್ ಪಕ್ಷ ಆಯ್ದುಕೊಂಡಿದ್ದು ಮಾತ್ರ ಸಮಾಜ ಘಾತುಕ ಹಿನ್ನೆಲೆಯ ವ್ಯಕ್ತಿಯನ್ನು. ಭ್ರಷ್ಟ, ಭೂಗಳ್ಳ, ರೌಡಿ ಹಿನ್ನೆಲೆ, ಮಹಿಳೆಯರ ಜತೆ ಅಸಭ್ಯ ವರ್ತನೆಯಂಥ ಗುಣಗಳು ಮೇಲ್ಮನೆಯ ಸದಸ್ಯತ್ವಕ್ಕೆ ಅರ್ಹತೆಯಾಯಿತೆ?
ಕೊತ್ವಾಲ್ ರಾಮಚಂದ್ರನ ಶಿಷ್ಯನೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿರುವಾಗ ರೌಡಿಶೀಟರ್ ಗಳು ಸಭ್ಯರಂತೆ ಕಾಣುವುದರಲ್ಲಿ ವಿಶೇಷತೆ ಏನಿಲ್ಲ. ಡಿಕೆಶಿಯವರೇ ಯಾವ ಅರ್ಹತೆಯ ಆಧಾರದಲ್ಲಿ ಈ ವ್ಯಕ್ತಿಯನ್ನು ಹಿರಿಯರ ಮನೆಗೆ ಕಳುಹಿಸಲು ಉತ್ಸಾಹ ತೋರುತ್ತಿದ್ದೀರಿ? ವಿನಾಶಕಾಲೇ ವಿಪರೀತ ಬುದ್ಧಿ ಎಂದು ಕಿಡಿಕಾರಿದೆ.