ಐರೋಪ್ಯ ದೇಶಗಳ ನಡುವೆ ದ್ವಿತೀಯ ವಿಶ್ವಮಹಾಯುದ್ಧದ ಹಗೆ ಪ್ರತ್ಯಕ್ಷವಾಗಿ ಮುಗಿದಿದ್ದರೂ ಪರಸ್ಪರರ ನಡುವೆ ಪರೋಕ್ಷವಾದ ಕೆಸರೆರಚಾಟಗಳನ್ನು ಆಗಾಗ ನೋಡುತ್ತಲೇ ಇರುತ್ತೇವೆ.
ಜರ್ಮನ್ ನಿರ್ಮಿತ ಬಿಎಂಡಬ್ಲ್ಯೂ, ಆಡಿಗಳಂಥ ಬ್ರಾಂಡ್‌ಗಳ ಕಾರುಗಳ ಚಾಲನೆ ಮಾಡುವ ಚಾಲಕರು ಸೈಕೋಪಾತ್ ಬುದ್ಧಿಗಳನ್ನು ಹೆಚ್ಚಾಗಿ ಹೊಂದಿರುವುದಾಗಿಯೂ, ಸ್ಕೋಡಾ ಮತ್ತು ಕಿಯಾದಂಥ ಬ್ರಾಂಡ್‌ಗಳನ್ನು ಓಡಿಸುವ ಮಂದಿಗೆ ಈ ಬುದ್ಧಿ ಸ್ವಲ್ಪ ಇರುವುದಾಗಿಯೂ ಬ್ರಿಟನ್‌ನ ಆಟೋಪೋರ್ಟಲ್ ಸ್ಕ್ರಾಪ್ ಕಾರ್ ಕಂಪಾರಿಷನ್ ನಡೆಸಿದ ಅಧ್ಯಯನ ವರದಿ ತಿಳಿಸುತ್ತಿದೆ.
BIG NEWS: 15 ಭ್ರಷ್ಟರು; 408 ACB ಅಧಿಕಾರಿಗಳಿಂದ 68 ಕಡೆ ಏಕಕಾಲದಲ್ಲಿ ದಾಳಿ
ವಿವಿಧ ಬ್ರಾಂಡ್‌ಗಳ ಕಾರುಗಳ ಚಾಲನೆ ಮಾಡುವ ಮಂದಿಯಲ್ಲಿ ಯಾವೆಲ್ಲಾ ಮಟ್ಟದಲ್ಲಿ ಸೈಕೋಪಾತ್ ಮನಸ್ಥಿತಿಗಳು ಮೊಳೆತಿವೆ ಎಂದು ಅರಿಯಲು ನಡೆಸಿದ ಈ ಪರೀಕ್ಷೆಯಲ್ಲಿ ಬ್ರಿಟನ್‌ನ ಒಂದಷ್ಟು ಮಂದಿ ಚಾಲಕರು ಭಾಗಿಯಾಗಿದ್ದರಂತೆ. ಕಾರುಗಳ ರಚನೆಯ ಆಧಾರದ ಮೇಲೆ ಅವುಗಳ ಮಾಲೀಕರ ಮನಸ್ಥಿತಿಗಳನ್ನು ಪರೀಕ್ಷಿಸಿದ್ದು, 36 ಅಂಕಗಳ ಈ ಪರೀಕ್ಷೆಯಲ್ಲಿ ಪ್ರತಿಯೊಂದು ಬ್ರಾಂಡ್‌ನ ಮಾಲೀಕರಿಗೆ ಇಂತಿಷ್ಟು ಅಂಕಗಳನ್ನು ನೀಡಲಾಗಿದೆ.
ಬಿಎಂಡಬ್ಲ್ಯೂ ಚಾಲಕರಿಗೆ ಎಲ್ಲರಿಗಿಂತ ಹೆಚ್ಚಾಗಿ ಸೈಕೋಪಾತ್ ಮನಸ್ಥಿತಿಗಳಿದ್ದು, ಇದರ ಹಿಂದೆ ಆಡಿ ಚಾಲಕರನ್ನು ಪಟ್ಟಿಯಲ್ಲಿ ತೋರಲಾಗಿದೆ.
ಸೈಕೋಪಾತ್ ಮನಸ್ಥಿತಿಗಳ ರ‍್ಯಾಂಕಿಂಗ್ ಪಟ್ಟಿ ಇಂತಿದೆ
1. ಬಿಎಂಡಬ್ಲ್ಯೂ (12.1 ಅಂಕಗಳು)
2. ಆಡಿ (11.7)
3. ಫಿಯಟ್ (7.0)
4. ಮಜ಼್ದಾ (6.4)
5. ಹೋಂಡಾ (6.3)
6. ಫೋರ್ಡ್ (6.1)
7. ಮರ್ಸಿಡಿಸ್ ಬೆಂಜ಼್ (5.9)
8. ಸಿಟ್ರೋಯೆನ್ (5.8)
9. ಫೋಕ್ಸ್‌ವ್ಯಾಗನ್ (5.4)
10. ಹ್ಯೂಂಡಾಯ್ (5.3)
ರ‍್ಯಾಂಕಿಂಗ್ ನೀಡುವ ವೇಳೆ ಕಾರುಗಳ ಬಣ್ಣವನ್ನೂ ಪರಿಗಣಿಸಲಾಗಿದೆ. ಹೊಂಬಣ್ಣ (12.7) ಮತ್ತು ಕಂದು (12.2) ಬಣ್ಣದ ಕಾರುಗಳ ಮಾಲೀಕರಿಗೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸೈಕೋಪಾತ್ ಮನಸ್ಥಿತಿಗಳು ಇವೆ ಎನ್ನಲಾಗಿದೆ.
3ಜೆಮ್ ಸಂಸ್ಥೆಯು ಈ ಅಧ್ಯಯನವನ್ನು ನವೆಂಬರ್ 2021ರಲ್ಲಿ ನಡೆಸಿದ್ದು, 2000ದಷ್ಟು ಚಾಲಕರು ಪರೀಕ್ಷೆಯಲ್ಲಿ ಭಾಗಿಯಾಗಿದ್ದಾರೆ.