ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಮಗನಿಗೆ ಚೀನಾದಲ್ಲಿ ತಂದೆಯೊಬ್ಬರು ಹೋಮ್ ಲ್ಯಾಬ್ನಲ್ಲಿ ಔಷಧ ತಯಾರಿಸಿದ್ದಾರೆ. ಹೌದು, ತಮ್ಮ ಎರಡು ವರ್ಷದ ಮಗ ಹಯೋಯಾಂಗ್ ಮೆಂಕೆಸ್ ಸಿಂಡ್ರೋಮ್ ನಿಂದ ಬಳಲುತ್ತಿದ್ದು ಕಂದನನ್ನು ಬದುಕಿಸಲು ಸ್ವತಃ ತಂದೆಯೇ ಔಷಧಿ ಕಂಡುಹಿಡಿದಿದ್ದಾರೆ. ಮತ್ತೆ ಕೋವಿಡ್-19 ಹೆಚ್ಚಳವಾದ್ದರಿಂದ ಚೀನಾದಲ್ಲಿ ಗಡಿಗಳನ್ನು ಮುಚ್ಚಲಾಗಿದೆ. ಹೀಗಾಗಿ ಎಲ್ಲೂ ಹೋಗುವಂತಿಲ್ಲ. ಏನು ಮಾಡುವುದು ಎಂದು ಕಂಗಾಲಾದ ತಂದೆ ಕ್ಸು ವಿಯು ತನ್ನ ಮನೆಯಲ್ಲೇ ಪ್ರಯೋಗಾಲಯವನ್ನು ತೆರೆದಿದ್ದಾರೆ.
ಹೈಸ್ಕೂಲ್ ಶಿಕ್ಷಣವನ್ನು ಮಾತ್ರ ಓದಿರುವ ಕ್ಸು, ತನ್ನ ಮಗ ಅನಾರೋಗ್ಯಕ್ಕೆ ಒಳಗಾಗುವ ಮೊದಲು ಸಣ್ಣ ಆನ್ಲೈನ್ ವ್ಯವಹಾರವನ್ನು ನಡೆಸುತ್ತಿದ್ದರು. ಮಗನ ಈ ಖಾಯಿಲೆಯ ಚಿಕಿತ್ಸೆ ಚೀನಾದಲ್ಲಿ ಲಭ್ಯವಿಲ್ಲ ಎಂಬುದನ್ನು ಅರಿತ ಕ್ಸು, ಸ್ವತಃ ಫಾರ್ಮಾಸ್ಯುಟಿಕಲ್ಸ್ ಸಂಶೋಧನೆ ಕಲಿಯಲು ಪ್ರಾರಂಭಿಸಿದ್ದಾರೆ. ಬಹಳ ಕಠಿಣ ಪರಿಶ್ರಮದಿಂದ ಇವರು ಔಷಧವನ್ನು ತಯಾರಿಸಿದ್ದಾರೆ.
ಕ್ಸು ಈಗ ಹಾಯಾಂಗ್ಗೆ ಮನೆಯಲ್ಲಿ ತಯಾರಿಸಿದ ಔಷಧಿಯ ದೈನಂದಿನ ಡೋಸ್ ಅನ್ನು ನೀಡುತ್ತಾರೆ. ಚಿಕಿತ್ಸೆಯನ್ನು ಪ್ರಾರಂಭಿಸಿದ ಎರಡು ವಾರಗಳ ನಂತರ ಮಗು ಮೊದಲಿಗಿಂತ ಸ್ವಲ್ಪ ಸುಧಾರಿಸಿದೆ ಎಂದು ಹೇಳಲಾಗಿದೆ.