ಫ್ರೆಂಚ್ ಯುವತಿ ಹಾಗೂ ದೇಶಿ ಹುಡುಗ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಇವರ ಮದುವೆ ಸಮಾರಂಭದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಯನ್ನು ಗಳಿಸುತ್ತಿದೆ.
ಪ್ಯಾರಿಸ್ ನಿವಾಸಿಯಾದ ಮೇರಿ ಲೋರಿ ಹರ್ಲ್ ಎಂಬವರು ತಮ್ಮ ಗೆಳೆಯ ರಾಕೇಶ್ರನ್ನು ವಿವಾಹವಾಗಲು ಬಿಹಾರದ ಬೇಗುಸರಾಯ್ಗೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ.
ಇವರಿಬ್ಬರು ಆರು ವರ್ಷಗಳ ಹಿಂದೆ ಮೊದಲ ಬಾರಿಗೆ ದೆಹಲಿಯಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಿದ್ದರು. ಆ ಸಮಯದಲ್ಲಿ ಕುಮಾರ್ ಗೈಡ್ ಆಗಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು. ಇದಾದ ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ.
ಮೇರಿ ಕೆಲ ಸಮಯದ ಬಳಿಕ ಫ್ರಾನ್ಸ್ಗೆ ಮರಳಿದ್ರು. ಮೂರು ವರ್ಷಗಳ ಹಿಂದೆ ರಾಕೇಶ್ ಕೂಡ ಫ್ರಾನ್ಸ್ಗೆ ತೆರಳಿದ್ರು. ಇಬ್ಬರೂ ಸೇರಿ ಫ್ರಾನ್ಸ್ನಲ್ಲಿ ಟೆಕ್ಸ್ಟೈಲ್ಸ್ ಉದ್ಯಮ ಆರಂಭಿಸಿದ್ರು ಎಂದು ರಾಕೇಶ್ ತಂದೆ ರಾಮಚಂದ್ರ ಹೇಳಿದ್ರು.
ಭಾರತೀಯ ಸಂಸ್ಕೃತಿಯನ್ನು ಪ್ರೀತಿಸುತ್ತಿದ್ದ ಮೇರಿ, ರಾಕೇಶ್ ತವರಿನಲ್ಲಿ ಮದುವೆ ಆಗಲು ನಿರ್ಧರಿಸಿದ್ದರು. ಇದಕ್ಕೆ ಮೇರಿ ಪೋಷಕರೂ ಸಹ ಸಮ್ಮತಿ ಸೂಚಿಸಿದ್ದರು.
ಭಾನುವಾರ ಈ ಜೋಡಿ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಅಂತರ್ ಜನಾಂಗೀಯ ವಿವಾಹಕ್ಕೆ ಗ್ರಾಮಸ್ಥರು ಮಾತ್ರವಲ್ಲದೇ ಅಕ್ಕ ಪಕ್ಕದ ಗ್ರಾಮದವರೂ ಸೇರಿ ಜನಸಾಗರವೇ ಹರಿದು ಬಂದಿದೆ. ಸೋಶಿಯಲ್ ಮೀಡಿಯೋದಲ್ಲಿಯೂ ಇವರ ಮದುವೆ ಫೋಟೋಗಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.