alex Certify ವಿಶ್ವದ ಅತಿದೊಡ್ಡ ನೆರ್ಫ್ ಗನ್ ನಿರ್ಮಿಸುವ ಮೂಲಕ ಗಿನ್ನಿಸ್ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತಿದೊಡ್ಡ ನೆರ್ಫ್ ಗನ್ ನಿರ್ಮಿಸುವ ಮೂಲಕ ಗಿನ್ನಿಸ್ ದಾಖಲೆ

80 ಕಿ.ಮೀ. ವೇಗದಲ್ಲಿ ಡಾರ್ಟ್‌ಗಳನ್ನು ಹಾರಿಸುವ ವಿಶ್ವದ ಅತಿದೊಡ್ಡ ನೆರ್ಫ್ ಗನ್ ನಿರ್ಮಿಸುವ ಮೂಲಕ ವ್ಯಕ್ತಿಯೊಬ್ಬರು ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದಾರೆ.

ನೆರ್ಫ್ ಗನ್ ಅಥವಾ ನೆರ್ಫ್ ಬ್ಲಾಸ್ಟರ್ ಎನ್ನುವುದು ಆಟಿಕೆ ಗನ್ ಆಗಿದೆ. ಇದನ್ನು ಸಾಮಾನ್ಯವಾಗಿ ಆಟಿಕೆಗಾಗಿ ಬಳಸಲಾಗುತ್ತದೆ. 1980ರ ದಶಕದಲ್ಲಿ ಮೊದಲಿಗೆ ಅವುಗಳನ್ನು ಬಹು ರೂಪಗಳಲ್ಲಿ ತಯಾರಿಸಲಾಗಿದೆ. ನೆರ್ಫ್ ಗನ್‌ಗಳು ಸಾಮಾನ್ಯ ಆಟಿಕೆ ಗನ್‌ನಷ್ಟು ದೊಡ್ಡದಾಗಿದೆ.

ಆದರೆ ರಾಕೆಟ್ ಶಿಪ್ ಬ್ಲಾಸ್ಟರ್‌ನ ಗಾತ್ರಕ್ಕೆ ನೆರ್ಫ್ ಗನ್ ಅನ್ನು ತಯಾರಿಸಲಾಗಿದೆ. ಅಮೆರಿಕದ ವ್ಯಕ್ತಿಯೊಬ್ಬರು ಹೊಸ ಗಿನ್ನಿಸ್  ದಾಖಲೆ ನಿರ್ಮಿಸಲು ಈ ಸಾಧನೆ ಮಾಡಿದ್ದಾರೆ. ಅಲಬಾಮಾದ ಮೈಕೆಲ್ ಪಿಕ್ ವಿಶ್ವದ ಅತಿದೊಡ್ಡ ನೆರ್ಫ್ ಗನ್ ಅನ್ನು ನಿರ್ಮಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ.  ಇದು ಸಾಮಾನ್ಯಕ್ಕಿಂತ 300 ಪ್ರತಿಶತ ದೊಡ್ಡದಾಗಿದೆ.

12 ಅಡಿ ಮತ್ತು 6 ಇಂಚು ಎತ್ತರ ಮತ್ತು 90 ಕೆ.ಜಿ ತೂಕ, 6 ಅಡಿ ಉದ್ದದ ನೆರ್ಫ್ ಗನ್ ಅನ್ನು ನಿರ್ಮಿಸಿದ ಹಿಂದಿನ ಗಿನ್ನೆಸ್ ವಿಶ್ವ ದಾಖಲೆಯ ಹೋಲ್ಡರ್ ಮಾರ್ಕ್ ರಾಬರ್ ಅವರನ್ನು ದಾಖಲೆಯನ್ನು ಪುಡಿಗಟ್ಟಿದ್ದಾರೆ.

ಈ ನಿರ್ಮಾಣದ ಅತ್ಯಂತ ಸವಾಲಿನ ಭಾಗವೆಂದರೆ ಏರ್ ಸಿಸ್ಟಮ್ ಅನ್ನು ನೆರ್ಫ್ ಗನ್‌ನ ಶೆಲ್‌ಗೆ ಹೊಂದಿಕೊಳ್ಳುವಂತೆ ಮಾಡುವುದು. ಮೈಕೆಲ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ದೈತ್ಯ ಗನ್‌ನ ಕಾರ್ಯನಿರ್ವಹಣೆಯನ್ನು ಪ್ರದರ್ಶಿಸಿದ್ದಾರೆ. ಮೈಕೆಲ್‌ಗೆ ಬಾಹ್ಯಾಕಾಶ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಅನುಭವವಿದ್ದ ಕಾರಣ ಕೆಲಸವು ತುಂಬಾ ಸವಾಲಿನದ್ದಾಗಿರಲಿಲ್ಲ.

ಕಂಪ್ಯೂಟರ್ ನೆರವಿನ ವಿನ್ಯಾಸವನ್ನು ಬಳಸಿಕೊಂಡು ಬಂದೂಕಿನ ಮಾದರಿಯನ್ನು ಅಭಿವೃದ್ಧಿಪಡಿಸಲು ಅವರು ಸಾಕಷ್ಟು ಶ್ರಮಿಸಿದ್ದಾರೆ. ನಂತರ  ಅವರು ಮರ ಮತ್ತು ಫ್ಲೈವುಡ್ನಲ್ಲಿ ಗನ್ ತಯಾರಿಸಲು ಪ್ರಾರಂಭಿಸಿದ್ದಾರೆ.

ಸಂಕೀರ್ಣ ಭಾಗಗಳನ್ನು ವಿನ್ಯಾಸಗೊಳಿಸಲು ಮೈಕೆಲ್ 3ಡಿ ಪ್ರಿಂಟರ್ ಬಳಸಿದ್ದಾರೆ. ಆದರೆ, ಹೆಚ್ಚಿನ ಗನ್ ಫ್ಲೈವುಡ್‌ನಿಂದ ಮಾಡಲ್ಪಟ್ಟಿದೆ. ಗನ್ 80 ಕಿಮೀ ವೇಗದಲ್ಲಿ ಡಾರ್ಟ್‌ಗಳನ್ನು ಶೂಟ್ ಮಾಡಬಹುದು. ಈ ಗನ್ ನಿರ್ಮಾಣಕ್ಕಾಗಿ ಮೈಕೆಲ್ ಸಾಕಷ್ಟು ಸಮಯ ಹಾಗೂ ಶ್ರಮವನ್ನು ವ್ಯಯಿಸಿದ್ದಾರೆ.

ವಿಡಿಯೋ ನೋಡಿ:

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...