ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆಯಿಡುತ್ತಿದ್ದಂತೆ ರಿಲಾಯನ್ಸ್ ಜಿಯೋ ಸಾಕಷ್ಟು ಧಮಾಲ್ ಮಾಡಿತ್ತು. ಜಿಯೋದ ಅಗ್ಗದ ಯೋಜನೆಗಳು ಗ್ರಾಹಕರನ್ನು ಸೆಳೆದಿದ್ದವು. ಈಗ್ಲೂ ಜಿಯೋ, ಗ್ರಾಹಕರಿಗಾಗಿ ಸಾಕಷ್ಟು ಹೊಸ ಹೊಸ ಯೋಜನೆಗಳನ್ನು ತರ್ತಿದೆ. ಆದ್ರೆ ಸೆಪ್ಟೆಂಬರ್ ತಿಂಗಳಿನಲ್ಲಿ ರಿಲಯನ್ಸ್ ಜಿಯೋಗೆ ಭಾರಿ ಹಿನ್ನಡೆಯಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಕೋಟಿಗಟ್ಟಲೆ ಗ್ರಾಹಕರು ಜಿಯೋ ತೊರೆದಿದ್ದಾರೆ.
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಬಿಡುಗಡೆ ಮಾಡಿರುವ ಡೇಟಾದಲ್ಲಿ ಈ ವಿಷ್ಯ ಬಹಿರಂಗವಾಗಿದೆ. ವರದಿಯ ಪ್ರಕಾರ, ಭಾರ್ತಿ ಏರ್ಟೆಲ್ ಸೆಪ್ಟೆಂಬರ್ ತಿಂಗಳಿನಲ್ಲಿ ಹಬ್ಬ ಮಾಡಿದೆ. 2.74 ಲಕ್ಷಕ್ಕೂ ಹೆಚ್ಚು ಗ್ರಾಹಕರು ಏರ್ಟೆಲ್ ಕೈ ಹಿಡಿದಿದ್ದಾರೆ. ಆದ್ರೆ ರಿಲಯನ್ಸ್ ಜಿಯೋ 19 ಮಿಲಿಯನ್ ಮತ್ತು ವೊಡಾಫೋನ್-ಐಡಿಯಾ 10.8 ಮಿಲಿಯನ್ ವೈರ್ಲೆಸ್ ಚಂದಾದಾರರನ್ನು ಕಳೆದುಕೊಂಡಿದೆ.
ಏರ್ಟೆಲ್ ವೈರ್ಲೆಸ್ ಚಂದಾದಾರರ ಮಾರುಕಟ್ಟೆ ಪಾಲು ಶೇಕಡಾ 0.08ರಷ್ಟಿದೆ. ಜಿಯೋ ಬಳಕೆದಾರರ ಬೇಸ್ ಸೆಪ್ಟೆಂಬರ್ನಲ್ಲಿ ಶೇಕಡಾ 4.29 ರಷ್ಟು ಕುಸಿದಿದೆ. ಒಟ್ಟು ವೈರ್ಲೆಸ್ ಚಂದಾದಾರರ ಸಂಖ್ಯೆ ಆಗಸ್ಟ್ ನಲ್ಲಿ 1.18 ಶತಕೋಟಿಯಿತ್ತು. ಸೆಪ್ಟೆಂಬರ್ ಅಂತ್ಯಕ್ಕೆ 1.16 ಶತಕೋಟಿಗೆ ಇಳಿದಿದೆ.
ಟ್ರಾಯ್ನ 4ಜಿ ಚಾರ್ಟ್ ಪ್ರಕಾರ, ಡೌನ್ಲೋಡ್ ವಿಷ್ಯದಲ್ಲಿ ರಿಲಯನ್ಸ್ ಜಿಯೋ ಅತ್ಯಧಿಕ ಡೌನ್ಲೋಡ್ ವೇಗವನ್ನು ನೀಡಿದೆ. ಇದು 20.9 Mbps ಆಗಿದೆ. ನಂತರ ವೊಡಾಫೋನ್ ಐಡಿಯಾ ಸರಾಸರಿ 14.4 Mbps ಡೌನ್ಲೋಡ್ ವೇಗವನ್ನು ಮತ್ತು ಏರ್ಟೆಲ್ 11.9. Mbps ವೇಗವನ್ನು ನೀಡಿದೆ.
ವೊಡಾಫೋನ್ ಐಡಿಯಾ 7.2 Mbps ಡೇಟಾ ವೇಗದೊಂದಿಗೆ ಅಪ್ಲೋಡ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ. ರಿಲಾಯನ್ಸ್ ಜಿಯೋ ಎರಡನೇ ಸ್ಥಾನದಲ್ಲಿದೆ. ಏರ್ಟೆಲ್ ಮೂರನೇ ಸ್ಥಾನದಲ್ಲಿದೆ.