ಜಗತ್ತಿನಲ್ಲಿ ಚಿತ್ರ-ವಿಚಿತ್ರ ಖಾಯಿಲೆಗಳಿವೆ. ಕೆಲವೊಂದರ ಹೆಸರು ವಿಚಿತ್ರವಾಗಿದ್ರೆ ಮತ್ತೆ ಕೆಲವು ಖಾಯಿಲೆ ಲಕ್ಷಣ ಭಿನ್ನವಾಗಿರುತ್ತದೆ. ಇತ್ತೀಚಿಗೆ ಹುಡುಗಿಯೊಬ್ಬಳು ತನ್ನ ತಾಯಿಗೆ ಕಾಡಿದ್ದ ಖಾಯಿಲೆ ಬಗ್ಗೆ ಹೇಳಿಕೊಂಡಿದ್ದಾಳೆ.
ನಾಟಿಂಗ್ಹ್ಯಾಮ್ ಮೂಲದ ಹೆಲೆನ್ ನೈಲರ್ ತಾಯಿ ಎಲಿನಾರ್ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದಾಳೆ. ತಾಯಿ ಸಾವಿನ ನಂತ್ರ ಹೆಲೆನ್ ತನ್ನ ತಾಯಿಯ ವೈಯಕ್ತಿಕ ಡೈರಿ ಓದಿದ್ದಾಳೆ. ಆಗ ತಾಯಿಯ ವಿಚಿತ್ರ ಖಾಯಿಲೆ ಬಗ್ಗೆ ತಿಳಿದು ದಂಗಾಗಿದ್ದಾಳೆ.
ಎಲಿನೋರ್ ಯಾವಾಗಲೂ ಕೀಲು ನೋವು, ಆಯಾಸ, ಅನಾರೋಗ್ಯ ಎನ್ನುತ್ತಿದ್ದಳಂತೆ. ಆದ್ರೆ ಡೈರಿಯಲ್ಲಿನ ಸತ್ಯ ಓದಿದ ನಂತರ, ಹೆಲೆನ್ ಕಂಗಾಲಾಗಿದ್ದಾಳೆ. ಎಲಿನೋರ್‌ಗೆ ಮಂಚೌಸೆನ್ಸ್ ಹೆಸರಿನ ವಿಚಿತ್ರ ಖಾಯಿಲೆಯಿತ್ತಂತೆ. ಈ ರೋಗ ಲಕ್ಷಣದಿಂದ ಬಳಲುತ್ತಿರುವ ಜನರು ಅನಾರೋಗ್ಯವೆಂದು ನಾಟಕವಾಡ್ತಾರೆ. ಇತರರ ಸೇವೆ ಪಡೆಯಲು ಹಾಗೂ ಸಹಾನುಭೂತಿ ಗಳಿಸಲು ಹೀಗೆ ಮಾಡ್ತಾರಂತೆ. ಇದ್ರಿಂದ ಅವರಿಗೆ ಆನಂದ ಸಿಗುತ್ತದೆಯಂತೆ. ಹೆಲೆನ್ ತಾಯಿ, 30 ವರ್ಷಗಳ ಕಾಲ ಅನಾರೋಗ್ಯದ ನಾಟಕವಾಡಿದ್ದಳಂತೆ. ಮನೆಯಿಂದ ಹೊರಗೆ ಬರ್ತಿರಲಿಲ್ಲವಂತೆ. ವಾಕಿಂಗ್ ಗೆ ಕೂಡ ಹೋಗ್ತಿರಲಿಲ್ಲವಂತೆ. ಆದ್ರೆ ಹೆಲೆನ್ ಶಾಲೆಗೆ ಹೋದಾಗ, ಸ್ನೇಹಿತರ ಜೊತೆ ತಾಯಿ ಸುತ್ತಾಡಲು ಹೋಗ್ತಿದ್ದಳಂತೆ.
ತಾಯಿಯ ಸೇವೆಯನ್ನು ಹೆಲೆನ್ ಅನೇಕ ಬಾರಿ ಮಾಡಿದ್ದಾಳಂತೆ. ಇಷ್ಟೇ ಅಲ್ಲ ಹೆಲೆನ್ ತಂದೆ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದು, ಅವರು ಸದ್ಯದಲ್ಲಿಯೇ ಸಾಯಬಹುದು ಎಂದು ತಾಯಿ ಹೇಳಿದ್ದಳಂತೆ. ಹೆಲೆನ್ ತಾಯಿ, ತನ್ನ ಡೈರಿಯಲ್ಲಿ, ಇದ್ರಿಂದ ನನಗೆ ತುಂಬಾ ಖುಷಿ ಸಿಗುತ್ತದೆ ಎಂದು ಬರೆದಿದ್ದಾಳಂತೆ. ತಾಯಿ ಸಾಯುವವರೆಗೂ ಹೆಲೆನ್ ಗೆ ಈ ಸಂಗತಿ ಗೊತ್ತಿರಲಿಲ್ಲವಂತೆ. ತಾಯಿಗೆ ನಿಜವಾಗಲೂ ನೋವಿನ ಖಾಯಿಲೆಯಿದೆ ಎಂದುಕೊಂಡಿದ್ದಳಂತೆ.