ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿಯಿದೆ. ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದೆ. ಬ್ಯಾಂಕ್ ಉಳಿತಾಯ ಖಾತೆಯ ಬಡ್ಡಿ ದರವನ್ನು ಬದಲಾಯಿಸಲು ನಿರ್ಧರಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಡಿಸೆಂಬರ್ 1 ರಿಂದ ಉಳಿತಾಯ ಖಾತೆಯ ಬಡ್ಡಿದರ ಕಡಿಮೆ ಮಾಡಲಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಪಿಎನ್‌ಬಿ ಬ್ಯಾಂಕ್‌ನ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳನ್ನು ವಾರ್ಷಿಕವಾಗಿ ಶೇಕಡಾ 2.90 ರಿಂದ ಶೇಕಡಾ 2.80 ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಹಳೆ ಮತ್ತು ಹೊಸ ಗ್ರಾಹಕರ ಮೇಲೆ ಇದು ಪರಿಣಾಮ ಬೀರಲಿದೆ.
10 ಲಕ್ಷ ರೂಪಾಯಿಗಿಂತ ಕಡಿಮೆ ಇರುವ ಉಳಿತಾಯ ಖಾತೆಗೆ ವಾರ್ಷಿಕ ಬಡ್ಡಿ ದರವು ಶೇಕಡಾ 2.80 ಆಗಿರಲಿದೆ. 10 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಉಳಿತಾಯಕ್ಕೆ ವಾರ್ಷಿಕ ಬಡ್ಡಿ ದರವು ಶೇಕಡಾ 2.85ರಷ್ಟಿರಲಿದೆ.
ಬೇರೆ ಬೇರೆ ಬ್ಯಾಂಕ್ ನ ಬಡ್ಡಿದರಗಳ ವಿವರ ಇಲ್ಲಿದೆ :
ಕೆನರಾ ಬ್ಯಾಂಕ್ : ಶೇ.2.90 – ಶೇ.3.20
ಐಡಿಬಿಐ ಬ್ಯಾಂಕ್ : ಶೇ. 3 – ಶೇ. 3.25
ಬ್ಯಾಂಕ್ ಆಫ್ ಬರೋಡಾ : ಶೇ. 2.75 – ಶೇ.3.20
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ : ಶೇ. 3.10