ಕೆಲವೊಮ್ಮೆ ವಿದ್ಯಾರ್ಥಿಗಳ ನಡವಳಿಕೆ, ಸ್ವಭಾವ, ಹಾವಭಾವಗಳು ಸಾಮಾನ್ಯ ಜನರನ್ನು ಕಂಗಾಲು ಮಾಡುತ್ತದೆ. ಹಾಗೆಯೇ ವಿದ್ಯಾರ್ಥಿಗಳ ವರ್ತನೆ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ಈಗ ಅಚ್ಚರಿ ಕೆಲಸ ಮಾಡಿದ್ದಾಳೆ. ಇದಕ್ಕೆ ಅವಳು ಕೊಟ್ಟ ಕಾರಣ ತಲೆ ತಿರುಗಿಸುವಂತಿದೆ.
ಅನೇಕರಿಗೆ ಬೆಳಿಗ್ಗೆ ಬೇಗ ಏಳುವುದು ಸಾಧ್ಯವಿಲ್ಲ. ರಾತ್ರಿ ತಡವಾಗಿ ಮಲಗುವವರು, ಸೂರ್ಯ ನೆತ್ತಿ ಮೇಲೆ ಬಂದಾಗ ಏಳ್ತಾರೆ. ಅದ್ರಲ್ಲೂ ಬೆಳ್ಳಂಬೆಳಿಗ್ಗೆ ಕ್ಲಾಸ್ ಕೇಳೋದು ತುಂಬಾ ಕಷ್ಟ ಎನ್ನುತ್ತಾರೆ ವಿದ್ಯಾರ್ಥಿಗಳು. ಈ ವಿದ್ಯಾರ್ಥಿನಿ ಕೂಡ ಅದೇ ಸಮಸ್ಯೆ ಎದುರಿಸಿದ್ದಾಳೆ. ಬೆಳಿಗ್ಗೆ ಬೇಗ ಎದ್ದು ಕ್ಲಾಸ್ ಅಟೆಂಡ್ ಮಾಡಲು ಆಲಸಿತನವಂತೆ. ಪಾಠ ಕೇಳುವಾಗ ನಿದ್ದೆ ಬರ್ತಿತ್ತಂತೆ. ಹಾಗಾಗಿ ಅವಳು ಹಾಸಿಗೆ ಸಮೇತ ಕ್ಲಾಸ್ ಗೆ ಹಾಜರಾಗಿದ್ದಾಳೆ. ಕ್ಲಾಸ್ ರೂಮಿಗೆ ಬಂದು ಹಾಸಿಗೆ ಹಾಸಿ ಮಲಗಿ ಪಾಠ ಕೇಳಲು ಸಿದ್ಧವಾಗಿದ್ದಾಳೆ. ಇವಳ ಕಾನ್ಫಿಡೆನ್ಸ್ ನೋಡಿ ಉಳಿದ ಸ್ಟುಟೆಂಟ್ಸ್ ಗೆ ದಂಗು ಬಡಿದಂತಾಗಿದೆ.
ಟಿಕ್ ಟಾಕ್ ನಲ್ಲಿ ಅಪ್ ಲೋಡ್ ಆಗಿರುವ ಈ ವಿದ್ಯಾರ್ಥಿನಿ ವಿಡಿಯೋ ಫುಲ್ ವೈರಲ್ ಆಗಿದೆ. ಮಾಗದಾ ಎನ್ನುವ ಹುಡುಗಿ ತನ್ನ ಗೆಳತಿ ಟ್ರಾಲಿಯಲ್ಲಿ ಹಾಸಿಗೆಯನ್ನು ಹಾಕಿಕೊಂಡು ಯುನಿವರ್ಸಿಟಿಗೆ ಬರುವ ವಿಡಿಯೋವನ್ನು ಶೂಟ್ ಮಾಡಿದ್ದಾಳೆ. ಹಾಸಿಗೆಯನ್ನು ತೆಗೆದುಕೊಂಡು ಬರುತ್ತಿರುವ ವಿದ್ಯಾರ್ಥಿನಿ ಬಿಳಿ ಬಣ್ಣದ ಗೌನ್, ಗಾಗಲ್ ಮತ್ತು ಸ್ಲೈಡರ್ಸ್ ಅನ್ನು ಧರಿಸಿದ್ದಾಳೆ. @kapciaks ಎಂಬ ಹೆಸರಿನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಹುಡುಗಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿ ಮಾಡ್ತಿದೆ. ಇವಳ ವಿಡಿಯೋವನ್ನು 24 ಗಂಟೆಯಲ್ಲಿ 4, 74000 ಜನರು ನೋಡಿದ್ದಾರೆ. 71000 ಜನರು ಇದನ್ನು ಲೈಕ್ ಮಾಡಿದ್ದಾರೆ.