
ಪೇಟಿಎಂ ಮೂಲ ಕಂಪನಿ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಷೇರುಗಳು ಲಿಸ್ಟಿಂಗ್‌ನ ಎರಡನೇ ದಿನವೂ ಕುಸಿತ ಕಂಡಿದೆ. ಆದರೆ, ಮಂಗಳವಾರ ಕಂಪನಿಯ ಷೇರುಗಳಲ್ಲಿ ಕೊಂಚ ಖರೀದಿ ಕಾಣಿಸುತ್ತಿದೆ. ಇಂದು ಕಂಪನಿಯ ಷೇರು ಬಿಎಸ್‌ಇಯಲ್ಲಿ 1434 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ.
ಪೇಟಿಎಂ ಐಪಿಒನಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಎರಡು ದಿನಕ್ಕೆ ಸುಮಾರು 900 ಮಿಲಿಯನ್ ಡಾಲರ್ ಅಂದ್ರೆ 6690 ಕೋಟಿ ರೂಪಾಯಿ ನಷ್ಟವಾಗಿದೆ.
ಪೇಟಿಎಂ ಐಪಿಒ, ಭಾರತದ ಅತಿದೊಡ್ಡ ಐಪಿಒ ಆಗಿದೆ. ಇದೇ ತಿಂಗಳು ಐಪಿಒ ಬಿಡುಗಡೆಯಾಗಿತ್ತು. ಪೇಟಿಎಂ ಷೇರುಗಳು ಸೋಮವಾರ ಎನ್ಎಸ್ಇ ನಲ್ಲಿ ಶೇಕಡಾ 12.74 ರಷ್ಟು ಕುಸಿದು 1,362.00 ರೂಪಾಯಿಗೆ ವಹಿವಾಟು ಮುಗಿಸಿತ್ತು.
ಪೇಟಿಎಂನ ಷೇರುಗಳು ಕಳೆದ ಗುರುವಾರ ಷೇರು ಮಾರುಕಟ್ಟೆಯಲ್ಲಿ ಮೊದಲ ಬಾರಿ ಲಿಸ್ಟ್ ಆಗಿತ್ತು. ಸುಮಾರು 1800 ಕೋಟಿ ರೂಪಾಯಿಗಳ ಐಪಿಒ ಆಗಿತ್ತು. ಹೂಡಿಕೆದಾರರು ಅನೇಕ ದಿನಗಳಿಂದ ಪೇಟಿಎಂ ಐಪಿಒಗೆ ಕಾದಿದ್ದರು. ಪೇಟಿಎಂ ಐಪಿಒ ಮೇಲೆ ನಿರೀಕ್ಷೆ ಹೆಚ್ಚಿತ್ತು. ಆದ್ರೆ ಲಿಸ್ಟ್ ಆದ ಮೊದಲ ದಿನವೇ ಹೂಡಿಕೆದಾರರು ದೊಡ್ಡ ನಷ್ಟ ಅನುಭವಿಸಿದ್ದರು.