ಕೋವಿಡ್ ಕಾಲಘಟ್ಟ ಹಾಗೂ ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಕಾಳಜಿಗಳ ನಡುವೆಯೂ ಭಾರತೀಯರು ಸಮತೋಲಿತ ಜೀವನದೊಂದಿಗೆ ವೈಯಕ್ತಿಕ ಕಾಳಜಿ, ವಸ್ತ್ರಗಳು, ವಾಹನ, ಪ್ರಯಾಣ ಹಾಗೂ ವಾಯುಯಾನಗಳಂಥ ಲಕ್ಸುರಿಗಳ ಮೇಲೆ ಖರ್ಚು ಮಾಡಲು ಚಿಂತಿಸುವುದಿಲ್ಲ ಎಂದು ಡೆಲಾಯ್ಟ್ ಟಚ್ ತೊಮಾತ್ಸು ಇಂಡಿಯಾ ನಡೆಸಿದ ಸರ್ವೇಯಿಂದ ತಿಳಿದು ಬಂದಿದೆ.
ಸರ್ವೇಯಲ್ಲಿ ಭಾಗಿಯಾದ ಭಾರತೀಯರ ಪೈಕಿ 58%ರಷ್ಟು ಮಂದಿ ಭವಿಷ್ಯಕ್ಕಾಗಿ ಉಳಿತಾಯಕ್ಕೆ ಮಹತ್ವ ಕೊಟ್ಟಿದ್ದರೆ, 50%ರಷ್ಟು ಮಂದಿ ಸರಕುಗಳು ಮತ್ತು ದೈಹಿಕ ವಸ್ತುಗಳ ಮೇಲೆ ಖರ್ಚು ಮಾಡಲು ಇಷ್ಟ ಪಡುತ್ತಾರೆ. ಕೋವಿಡ್ ಲಸಿಕಾಕರಣ ಏರುಗತಿಯಲ್ಲಿ ಸಾಗುತ್ತಿದ್ದು, ಗ್ರಾಹಕರ ಭಾವನೆಗಳು ಸಕಾರಾತ್ಮಕವಾಗಿರುವ ಕಾರಣ ಈ ಬದಲಾವಣೆಗೆ ಕಾರಣವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕೋವಿಡ್-19 ಪ್ರಕರಣಗಳು ತಗ್ಗುತ್ತಾ ಸಾಗಿ, ಕೆಲಸದ ಸ್ಥಳಗಳು ತೆರೆಯುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ಮೂರು ವರ್ಷಗಳಲ್ಲಿ ತಮ್ಮ ಆರ್ಥಿಕ ಸ್ಥಿತಿಗತಿಗಳು ಇನ್ನಷ್ಟು ಚೆನ್ನಾಗಿರಲಿದೆ ಎಂದು ಸಮೀಕ್ಷೆಯಲ್ಲಿ ಭಾಗಿಯಾದ 77%ರಷ್ಟು ಮಂದಿ ವಿಶ್ವಾಸ ಹೊಂದಿದ್ದಾರೆ.
ಸರ್ವೇಯಲ್ಲಿ ಭಾಗಿಯಾದ 74%ನಷ್ಟು ಮಂದಿ ಹಣದುಬ್ಬರದ ಕುರಿತು ಚಿಂತಿತರಾಗಿದ್ದರೆ, 85%ನಷ್ಟು ಮಂದಿ ಮುಂದಿನ ನಾಲ್ಕು ವಾರಗಳ ಒಳಗೆ ಟ್ರಾವೆಲ್ ಪ್ಲಾನ್ ಹೊಂದಿದ್ದಾರೆ. 71%ದಷ್ಟು ಮಂದಿ ಒನ್-ಆನ್-ಒನ್ ಸೇವೆಗಳಲ್ಲಿ ಭಾಗಿಯಾಗುವುದು ಹಾಗೂ 68%ದಷ್ಟು ಮಂದಿ ರೆಸ್ಟೋರೆಂಟ್ಗೆ ಹೋಗುವುದು ಸುರಕ್ಷಿತವೆಂದು ಭಾವಿಸಿದ್ದಾರೆ.
ಪ್ರವಾಹದಲ್ಲಿ ಸಿಲುಕಿದ್ದ ಅರ್ಚಕನನ್ನು ಸಾಹಸದಿಂದ ರಕ್ಷಿಸಿದ ಆಂಧ್ರ ಪೊಲೀಸ್
ಇದೇ ಸಮೀಕ್ಷೆಯಲ್ಲಿ ಭಾಗಿಯಾದ ದಕ್ಷಿಣ ಆಫ್ರಿಕನ್ನರ ಪೈಕಿ 86%ದಷ್ಟು ಮಂದಿ ಹಣದುಬ್ಬರದ ಬಗ್ಗೆ ಕಳಕಳಿ ಹೊಂದಿದ್ದರೆ, ಸ್ಪೇನ್ನ ಮಂದಿಯ ಪೈಕಿ 85%, ಪೋಲೆಂಡ್ನ 84%, ಬ್ರೆಜ಼ಿಲ್ನ 80%, ಕೆನಡಾದ 74%, ಬ್ರಿಟನ್ನ 72% ಹಾಗೂ ಅಮೆರಿಕದ 71%ರಷ್ಟು ಮಂದಿ ಹಣದುಬ್ಬರದ ಬಗ್ಗೆ ಕಳಕಳಿ ಹೊಂದಿದ್ದಾರೆ.
ಇದೇ ವೇಳೆ, ಸಮೀಕ್ಷೆಯಲ್ಲಿ ಭಾಗಿಯಾದ ಭಾರತೀಯರ ಪೈಕಿ ಮುಂದಿನ ಆರು ತಿಂಗಳ ಒಳಗೆ ವಾಹನವೊಂದನ್ನು ಖರೀದಿ ಮಾಡಲು ಪ್ಲಾನ್ ಹೊಂದಿದ್ದಾರೆ. ಇವರ ಪೈಕಿ 30%ರಷ್ಟು ಮಂದಿ ತಮ್ಮ ಹಳೆಯ ವಾಹನವನ್ನು ಹೊಸ ವಾಹನಕ್ಕೆ ಬದಲಿಸಲು ಇಚ್ಛಿಸುವುದಾಗಿ ತಿಳಿಸಿದ್ದು, ಹೊಸ ಫೀಚರ್ಗಳು ಇರುವ ವಾಹನಗಳನ್ನು ಖರೀದಿಸಲು ಇಚ್ಛಿಸುತ್ತಾರಂತೆ.
ಅಬ್ಬಾ….! ಒಂದೇ ವಾರದಲ್ಲಿ 23 ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ…..!
ಭಾರತದ ಬಹುತೇಕರು ತಮ್ಮ ವಾಲೆಟ್ನ ಬಹುಪಾಲು ಹಣವನ್ನು ವೈಯಕ್ತಿಕ ಕಾಳಜಿ ಹಾಗೂ ವಸ್ತ್ರ (14%) ಜೊತೆಗೆ ಮೋಜು, ಮನರಂಜನೆ ಹಾಗೂ ರಜೆಯ ಪ್ರಯಾಣ (14%) ಎಲೆಕ್ಟ್ರಾನಿಕ್ಸ್ ಹಾಗೂ ಮನೆಯ ಫರ್ನಿಶಿಂಗ್ (11%) ಮೇಲೆ ಖರ್ಚು ಮಾಡಲು ಇಚ್ಛಿಸುತ್ತಾರಂತೆ.
ವಾಸ್ತವವನ್ನು ಅನುಭವಿಸಲು ಇಚ್ಛಿಸುತ್ತಿರುವ ಭಾರತೀಯ ಮಂದಿ ವಿವೇಚನಶೀಲ ಹಾಗೂ ಅರ್ಥಪೂರ್ಣ ಖರ್ಚು ಮಾಡಲು ಇಚ್ಛಿಸುವುದಾಗಿ ಡೆಲಾಯ್ಟ್ ಟಚ್ ತೊಮಾತ್ಸು ಇಂಡಿಯಾ ಎಲ್ಎಲ್ಪಿ ಪಾರ್ಟ್ನರ್ ಅಂಡ್ ಕನ್ಸ್ಯೂಮರ್ ಉದ್ಯಮದ ದಿಗ್ಗಜ ಪೋರಸ್ ಡಾಕ್ಟರ್ ತಿಳಿಸಿದ್ದಾರೆ.
ಈ ಕಾರಣದಿಂದ ಜನರಲ್ಲಿ ಉದ್ದೇಶವೊಂದರ ಭಾವ ಮೂಡಿ, ತಮ್ಮ ವೈಯಕ್ತಿಕ ಮೌಲ್ಯಗಳನ್ನು ಪ್ರತಿಧ್ವನಿಸುವ ಬ್ರಾಂಡ್ಗಳು ಹಾಗೂ ಪ್ಲಾಟ್ಫಾರಂಗಳೊಂದಿಗೆ ತಮ್ಮ ಅಭಿರುಚಿಗೆ ತಕ್ಕಂತೆ ಭಾಗಿಯಾಗಿರಲು ಇಚ್ಛಿಸುತ್ತಾರೆ ಎಂದು ಪೋರಸ್ ಡಾಕ್ಟರ್ ತಿಳಿಸಿದ್ದಾರೆ.