ಅನೇಕ ಜನರು ಫಾಸ್ಟ್ ಫುಡ್ ಅನ್ನು ಬಹಳ ಇಷ್ಟಪಡುತ್ತಾರೆ. ಬೀದಿ ವ್ಯಾಪಾರಿಗಳು ಕೂಡ ಆಗಾಗ ವಿಭಿನ್ನ, ವಿಶಿಷ್ಟ ಶೈಲಿಯ ತಿನಿಸುಗಳನ್ನು ತಯಾರಿಸುತ್ತಿರುತ್ತಾರೆ. ಕೆಲವೊಬ್ಬರು ಬ್ರೆಡ್ ಅನ್ನು ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಎಸೆಯುವುದು, ಅತಿ ವೇಗದಲ್ಲಿ 30 ದೋಸೆಗಳನ್ನು ಮಾಡುವುದು ಮುಂತಾದ ಪ್ರತಿಭಾವಂತ ತಯಾರಕರು ಕೂಡ ಇದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ನೀವು ಖಂಡಿತಾ ಶಾಕ್ ಆಗ್ತೀರಾ.
ಬೀದಿ ವ್ಯಾಪಾರಿ, ಮಾರಾಟಗಾರನೊಬ್ಬ ಪಾತ್ರೆಯಲ್ಲಿ ಬೀನ್ಸ್ ಗಳನ್ನು ಬೇಯಿಸಿದ್ದಾನೆ. ನಂತರ ಅದನ್ನು ದೂರಕ್ಕೆ ಎಸೆದಿದ್ದಾನೆ. ರಸ್ತೆಯಾಚೆಗೆ ಕೆಲವು ಮೀಟರ್ ಗಳಷ್ಟು ದೂರದಲ್ಲಿ ನಿಂತಿದ್ದ ವ್ಯಕ್ತಿ ಎಸೆದ ಖಾದ್ಯವನ್ನು ಕ್ಯಾಚ್ ಹಿಡಿದಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದೊಂಥರಾ ಕ್ರಿಕೆಟ್ ಆಟದ ವೇಳೆ ಬ್ಯಾಟ್ಸ್ ಮ್ಯಾನ್ ಬೀಸಿದ ಬಾಲ್ ಅನ್ನು ಫೀಲ್ಡರ್ ಕ್ಯಾಚ್ ಹಿಡಿಯುವ ರೀತಿಯಲ್ಲಿ, ಖಾದ್ಯವನ್ನು ಎಸೆಯಲಾಗಿದೆ. ರಸ್ತೆಯಿಂದಾಚೆಗೆ ನಿಂತಿದ್ದ ವ್ಯಕ್ತಿ ಖಾದ್ಯವನ್ನು ಸರಿಯಾಗಿ ತನ್ನ ತಟ್ಟೆಗೆ ಕ್ಯಾಚ್ ಪಡೆದಿರುವುದು ನೆಟ್ಟಿಗರನ್ನು ನಿಬ್ಬೆರಗಾಗಿಸಿದೆ.
ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಅಪ್ಲೋಡ್ ಆದ ಕೇವಲ ಒಂದು ವಾರದಲ್ಲಿ 23 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಜೊತೆಗೆ 12 ಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದೆ. ಇದನ್ನು ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿಯೂ ಕೂಡ ಹಂಚಿಕೊಳ್ಳಲಾಗಿದೆ.