ಲಕ್ನೋ: ಪ್ರತಿ ವರ್ಷವೂ ಕೇವಲ ಹುಡುಗರು ಮಾತ್ರ ಲಕ್ನೋ ವಿವಿಯಲ್ಲಿ ಬ್ಯಾಂಡ್ ನುಡಿಸುತ್ತಿದ್ದರು. ಆದರೆ, ಈ ಬಾರಿ ಯುವತಿಯರ ಗುಂಪು ಬ್ಯಾಂಡ್ ಪ್ರದರ್ಶನ ನೀಡಲಿದೆ. ಹೊಸದಾಗಿ ರೂಪುಗೊಂಡ ಆಲ್-ಗರ್ಲ್ಸ್ ಬ್ಯಾಂಡ್ ರೂಹಾನಿಯು ನವೆಂಬರ್ 25 ರಂದು ಲಕ್ನೋ ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದೆ.
ರೂಹಾನಿ ಎಂಬ ಹೆಸರಿನ ರಾಜ್ಯದ ಮೊದಲ ಹುಡುಗಿಯರ ಬ್ಯಾಂಡ್ ಲಿಂಗ ಸಂವೇದನೆಯ ಸಂದೇಶವನ್ನು ಕಳುಹಿಸುವ ಗುರಿಯನ್ನು ಹೊಂದಿದೆ. ಆಲ್-ಗರ್ಲ್ಸ್ ಬ್ಯಾಂಡ್ ಕೇವಲ ಎರಡು ವಾರಗಳ ಹಿಂದೆ ಅಸ್ತಿತ್ವಕ್ಕೆ ಬಂದಿತ್ತು ಹಾಗೂ ಇದನ್ನು ಇನ್ನೂ ಪುನರಚನೆ ಮಾಡಲಾಗುತ್ತಿದೆ. ಇದು ವಿಶ್ವವಿದ್ಯಾನಿಲಯದ ಲಿಂಗ ಸಂವೇದನೆ ಕೋಶದ ರೋಲಿ ಮಿಶ್ರಾ ಅವರ ಕನಸಿನ ಕೂಸಾಗಿದೆ.
ಪ್ರತಿ ವರ್ಷ, ರುಬಾರು ಆಲ್-ಬಾಯ್ಸ್ ಬ್ಯಾಂಡ್, ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಾರೆ. ಲಿಂಗ ಸಂವೇದನೆಯ ಬಗ್ಗೆ ಸಂದೇಶವನ್ನು ಕಳುಹಿಸಲು ಈವೆಂಟ್ ಅತ್ಯುತ್ತಮ ವೇದಿಕೆಯಾಗಿದೆ ಹಾಗೂ ಯುವತಿಯರ ಕೂಡ ಬಹಳ ಚೆನ್ನಾಗಿ ಬ್ಯಾಂಡ್ ಪ್ರದರ್ಶನ ನೀಡುತ್ತಾರೆ ಎಂಬುದನ್ನು ತಿಳಿಸಬೇಕಾಗಿದೆ ಎಂದು ರೋಲಿ ಮಿಶ್ರಾ ಹೇಳಿದ್ದಾರೆ.
ರುಬಾರು ಸದಸ್ಯರೂ ಮುಂದೆ ಬಂದು ಪ್ರತಿಭಾವಂತ ಯುವತಿಯರನ್ನು ಹುಡುಕುವಲ್ಲಿ ಸಹಾಯ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ, ಬ್ಯಾಂಡ್ ಆಕಾರವನ್ನು ಪಡೆಯಲಾರಂಭಿಸಿತು. ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದ ಎಂಎ ವಿದ್ಯಾರ್ಥಿನಿ ಪ್ರಜಕ್ತಾ ಶರ್ಮಾ ತಂಡವನ್ನು ಸೇರಿಕೊಂಡರು. ಹಾರ್ಮೋನಿಯಂನಲ್ಲಿ ಮಾಂತ್ರಿಕ ಸ್ಪರ್ಶ ಹೊಂದಿರುವ ಸಿಮಂತಿ ಪ್ರಕಾಶ್ ನಂತರ ಸೇರಿಕೊಂಡರು, ಮ್ಯಾಂಡೋಲಿನ್ ನುಡಿಸುವ ಅನ್ಶಿಕಾ ಶುಕ್ಲಾ, ಇಶಿಕಾ ನಾರಾಯಣ್ ಅವರು ಕೂಡ ತಂಡವನ್ನು ಸೇರಿದ್ದಾರೆ. ಹೀಗಾಗಿ ಯುವತಿಯರೆಲ್ಲಾ ಸೇರಿ ಬಹಳ ಪರಿಶ್ರಮದಿಂದ ಅಭ್ಯಾಸ ಮಾಡುತ್ತಿದ್ದಾರೆ.