alex Certify ಓಲಾಗೆ ಟಕ್ಕರ್ ನೀಡಲಿದೆ ಈ ಎಲೆಕ್ಟ್ರಿಕ್ ಸ್ಕೂಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಲಾಗೆ ಟಕ್ಕರ್ ನೀಡಲಿದೆ ಈ ಎಲೆಕ್ಟ್ರಿಕ್ ಸ್ಕೂಟರ್

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಎಲೆಕ್ಟ್ರಿಕ್ ಸ್ಕೂಟರ್ ಭಾರತದ ರಸ್ತೆಯಲ್ಲಿ ಓಡಾಡ್ತಿದೆ. ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಹಾಗೂ ಪರಿಸರ ರಕ್ಷಣೆ ಹೆಸರಿನಲ್ಲಿ ಜನರು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಮುಂದಾಗ್ತಿದ್ದಾರೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ  ಡಾರ್ವಿನ್, ಭಾರತದಲ್ಲಿ ಮೂರು ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಿದೆ. D-5, D-7 ಮತ್ತು D-14 ಎಂದು ಕಂಪನಿ ನಾಮಕರಣ ಮಾಡಿದೆ.

ಕಂಪನಿಯು ಈ ಮೂರು ಮಾಡೆಲನ್ನು ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಿದೆ. ಈ ಮೂರು ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕ್ರಮವಾಗಿ 68,000 ರೂಪಾಯಿ,73,000 ರೂಪಾಯಿ ಮತ್ತು 77,000 ರೂಪಾಯಿಯಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಈ ಎಲೆಕ್ಟ್ರಿಕ್ ಸ್ಕೂಟರ್ 70 ರಿಂದ 120 ಕಿಲೋಮೀಟರ್ ಚಲಿಸುತ್ತದೆ.

ಅನೇಕ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಂದಿದೆ. ಆದ್ರೆ ಜನರು ಓಲಾ ಎಲೆಕ್ಟ್ರಿಕ್ ಸ್ಕೂಟರನ್ನು ಹೆಚ್ಚು ಇಷ್ಟಪಟ್ಟಿದ್ದಾರೆ. ಓಲಾದ ಎಸ್1 ಮತ್ತು ಎಸ್1 ಪ್ರೊಗೆ ಹೆಚ್ಚಿನ ಬೇಡಿಕೆಯಿದೆ. ಇವೆರಡರ ಬೆಲೆಗಳು ಕ್ರಮವಾಗಿ 1 ಲಕ್ಷ ಮತ್ತು 1.30 ಲಕ್ಷ ರೂಪಾಯಿ.ಎಸ್ 1 ಪ್ರೊ ಸ್ಕೂಟರ್ ಬ್ಯಾಟರಿ ಒಮ್ಮೆ ಫುಲ್ ಚಾರ್ಜ್ ಆದ್ರೆ 181 ಕಿಲೋಮೀಟರ್ವರೆಗೆ ಚಲಿಸುತ್ತದೆ ಎಂದು ಕಂಪನಿ ಹೇಳಿದೆ. ಓಲಾ ಸ್ಕೂಟರ್ ಗೆ ಡಾರ್ವಿನ್‌ ಸ್ಕೂಟರ್‌ ಟಕ್ಕರ್ ನೀಡುವ ಸಾಧ್ಯತೆಯಿದೆ. ಡಾರ್ವಿನ್ ಸ್ಕೂಟರ್, ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಿಂತ ಹೆಚ್ಚು ಅಗ್ಗವಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...