ಶಿವಮೊಗ್ಗ: ಅರಗ ಜ್ಞಾನೇಂದ್ರ ವಿರುದ್ಧವೇ ಸಾಕಷ್ಟು ಕೇಸುಗಳಿವೆ. ಈಗ ಅವರೇ ಗೃಹಮಂತ್ರಿಯಾಗಿದ್ದಾರೆ. ಹೀಗಾದರೆ ನ್ಯಾಯ ಸಿಗುತ್ತಾ? ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ ವ್ಯಂಗ್ಯವಾಡಿದ್ದಾರೆ.
ಅರಗ ಜ್ಞಾನೇಂದ್ರ ಇಡೀ ರಾಜ್ಯಕ್ಕೆ ಗೃಹ ಮಂತ್ರಿಯಾಗಿಲ್ಲ. ಅವರು ಕೇವಲ ತೀರ್ಥಹಳ್ಳಿಗೆ ಗೃಹಮಂತ್ರಿಯಾಗಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆ ಮತ್ತು ಆರ್ ಎಫ್ ಕಚೇರಿಗೆ ಮಾತ್ರ ಸೀಮಿತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ತಿಂಗಳಿಗೆ 12,500 ಹೂಡಿಕೆ ಮಾಡಿ, 15 ವರ್ಷದಲ್ಲಿ 40 ಲಕ್ಷ ರೂ ರಿಟರ್ನ್ಸ್ ಪಡೆಯಿರಿ….!
ಬಿಜೆಪಿಯವರೇ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿದ್ದಾರೆ. ಕಾರ್ಯಕರ್ತರೇ ಗೃಹ ಸಚಿವರು, ಪೊಲೀಸರು ಆಗಿದ್ದಾರೆ. ಗೃಹ ಸಚಿವರಾಗಿರುವ ಅರಗ ಜ್ಞಾನೇಂದ್ರ ಕಾರ್ಯವೈಖರಿಯೇ ಸರಿಯಿಲ್ಲ ಎಂದು ಕಿಡಿಕಾರಿದರು.
ತೀರ್ಥ ಹಳ್ಳಿಯಲ್ಲಿ ಹಲವು ಕೋಮುಗಲಭೆಗಳು ನಡೆದಿವೆ. ಅದರಲ್ಲಿ ಅರಗ ಜ್ಞಾನೇಂದ್ರ ವಿರುದ್ಧವೇ ಅದೆಷ್ಟೋ ಕೇಸುಗಳು ಇವೆ. ಈಗ ನೋಡಿದರೆ ಅವರೇ ಗೃಹಮಂತ್ರಿಗಳಾಗಿದ್ದಾರೆ. ಹೀಗಾದರೆ ನ್ಯಾಯ ಸಿಗುತ್ತಾ? ಎಲ್ಲಾ ಜಾತಿ, ಧರ್ಮವನ್ನು ಒಟ್ಟಾಗಿ ತೆಗೆದುಕೊಂಡು ಹೋಗದಿದ್ದರೆ ಈ ದೇಶ ಉಳಿಯುವುದಿಲ್ಲ ಎಂದು ಹೇಳಿದರು.