ವಧು/ವರಾನ್ವೇಷಣೆಯ ಜಾಹೀರಾತುಗಳಲ್ಲಿ ಸಾಮಾನ್ಯವಾಗಿ ಜಾತಿ, ಪಂಥ/ಉಪಪಂಥಗಳ ಒಳಗೇ ನಿರ್ದಿಷ್ಟವಾಗಿ ಹುಡುಕುವ ಲೆಕ್ಕವಿಲ್ಲದಷ್ಟು ಮಂದಿಯನ್ನು ಕಂಡಿದ್ದೇವೆ.
ಕೆಲವೊಂದು ಪ್ರಕರಣಗಳಲ್ಲಿ ಮ್ಯಾಟ್ರಿಮೋನಿ ಜಾಹೀರಾತುಗಳು ತೀರಾ ರೇಜಿಗೆ ಹುಟ್ಟಿಸುವ ಮಟ್ಟಿಗೆ ನಿರೀಕ್ಷೆಗಳ ಪಟ್ಟಿ ಹೊಂದಿರುತ್ತವೆ. ರೆಡ್ಡಿಟ್ ಮೂಲಕ ಸಾಮಾಜಿಕ ಜಾಲತಾಣದ ಜಗತ್ತಿಗೆ ಪರಿಚಯವಾದ ‘Betterhalf.ai’ ಎಂಬ ಪೋರ್ಟಲ್ನಲ್ಲಿ ಬಂದ ಈ ಜಾಹೀರಾತು ನೋಡಿ ನೆಟ್ಟಿಗರಿಗೆ ನಗಬೇಕೋ ಅಳಬೇಕೋ ತಿಳಿಯದಂತಾಗಿದೆ.
’ಸಾಂಪ್ರದಾಯಿಕವಾದ’ ಹಾಗೂ ’ಧಾರಾಳಿಯಾದ’ ಸಂಗಾತಿಯನ್ನು ಹುಡುಕುತ್ತಿರುವ ಈ ಮಹಾಶಯ ತನ್ನ ಭಾವೀ ಸಂಗಾತಿ ಹೇಗಿರಬೇಕೆಂಬ ವಿವರಗಳನ್ನು ಬ್ರಾದಿಂದ ಕಾಲಿನ ಅಳತೆಯವರೆಗೂ ಕೊಟ್ಟಿದ್ದಾನೆ.
’ಮ್ಯಾನಿಕ್ಯೂರ್/ಪೆಡಿಕ್ಯೂರ್ ಮಾಡಿಕೊಂಡು ಕ್ಲೀನ್ ಆಗಿರಬೇಕು’ ಎಂದು ತನ್ನ ಭಾವಿ ಸಂಗಾತಿಯನ್ನು ನಿರೀಕ್ಷಿಸುವ ಈತನ ಈ ಅಪೇಕ್ಷೆಯಲ್ಲೇನೂ ಅಂಥಾ ತಪ್ಪಿಲ್ಲ. ಆದರೆ ಈತನ ಬೇಡಿಕೆಯ ಪಟ್ಟಿ ಹಾಗೇ ಮುಂದುವರೆದು, “ನಿನ್ನ ಧರಿಸು 80% ಕ್ಯಾಶುವಲ್ ಆಗಿದ್ದು, 20% ಫಾರ್ಮಲ್ ಆಗಿರಬೇಕು, ಆದರೆ ಬೆಡ್ನಲ್ಲಿ ಕಾಸ್ಟ್ಯೂಮ್ ಧರಿಸುವಂತಿರಬೇಕು,” ಎಂದಿದ್ದಾನೆ.
18-26 ವರ್ಷದೊಳಗಿನ ಹುಡುಗಿಯ ತಲಾಶೆಯಲ್ಲಿರುವ ಈತ ಆಕೆಯ ಸೊಂಟದ ಗಾತ್ರದೊಂದಿಗೆ ರಾಜಕೀಯ ನಿಲುವುಗಳು ಹೇಗಿರಬೇಕು ಹಾಗೂ ಬೆಡ್ ಮೇಲೆ ’ಕಾಸ್ಟ್ಯೂಮ್ಸ್’ಗೆ ಮುಕ್ತವಿರಬೇಕು ಎಂದೆಲ್ಲಾ ಬರೆದಿದ್ದು, ’ಪ್ರಾಮಾಣಿಕವಾಗಿದ್ದು, ಚಲನಚಿತ್ರಗಳು, ರಸ್ತೆ ಟ್ರಿಪ್ಗಳು ಹಾಗೂ ಕೌಟುಂಬಿಕ ವಿಷಯಗಳನ್ನು ಇಷ್ಟ ಪಡುವಂತಿರಬೇಕು,” ಎಂದೂ ಕೇಳಿಕೊಂಡಿದ್ದಾನೆ.
ಆತನ ಈ ಹುಚ್ಚಾಟ ಇಲ್ಲಿಗೇ ನಿಂತಿಲ್ಲ. ಅದರ ಪರಿಯನ್ನು ಅರಿಯಲು ಈ ಜಾಹೀರಾತನ್ನೊಮ್ಮೆ ನೀವೂ ನೋಡಿ:
https://twitter.com/ThatNaimish/status/1461601488808022016?ref_src=twsrc%5Etfw%7Ctwcamp%5Etweetembed%7Ctwterm%5E1461601488808022016%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fbizarre-man-looking-for-bride-specifies-breast-waist-and-feet-size-in-matrimonial-ad-4465424.html