ಪ್ರಪಂಚದಲ್ಲಿ ಪೋರ್ನ್ ಸಿನಿಮಾ ಜಗತ್ತು ಬೆಳೆಯುತ್ತಿದೆ. ಕೆಲವು ದೇಶದಲ್ಲಿ ಇದು ಕಾನೂನು ಬಾಹಿರವಾಗಿದ್ದರೂ ಕದ್ದುಮುಚ್ಚಿ ಪೋರ್ನ್ ಸಿನೆಮಾಗಳು ನಿರ್ಮಾಣವಾಗುತ್ತದೆ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕೆಲವೇ ಕೆಲವು ಬ್ಯುಸಿನೆಸ್ ಗಳು ಹೆಚ್ಚು ಹಣ ಮಾಡಿವೆ. ಅದ್ರಲ್ಲಿ ಪೋರ್ನ್ ಉದ್ಯಮ ಕೂಡ ಒಂದು. ಲಾಕ್ ಡೌನ್ ಸಮಯದಲ್ಲಿ ಜನರು ಹೆಚ್ಚು ಹೆಚ್ಚು ಪೋರ್ನ್ ಸಿನೆಮಾಗಳನ್ನು ನೋಡಿದ್ರೆ, ಹೆಚ್ಚು ಹೆಚ್ಚು ಸಿನಿಮಾ ಶೂಟಿಂಗ್ ಕೂಡ ನಡೆದಿದೆ.
ಲಾಸ್ ಎಂಜಲೀಸ್ ನಲ್ಲಿರುವ ಐಶಾರಾಮಿ ಬಂಗಲೆ ಕೂಡ ಈ ಕಾರಣಕ್ಕಾಗಿಯೇ ಚರ್ಚೆಗೆ ಗ್ರಾಸವಾಗಿದೆ. ಈ ಬಂಗಲೆಯಲ್ಲಿ ಸಾವಿರಾರು ಪೋರ್ನ್ ಮೂವಿಗಳು ರೆಕಾರ್ಡ್ ಆಗಿವೆ. ಲಾಸ್ ಎಂಜಲೀಸ್ ನ ಸ್ಯಾನ್ ಫರ್ನಾಂಡೋ ವ್ಯಾಲಿ, ಪೋರ್ನ್ ವ್ಯಾಲಿ ಎಂದೇ ಹೆಸರುವಾಸಿಯಾಗಿದೆ. ಈ ವ್ಯಾಲಿಯಲ್ಲಿರುವ ಹಲವಾರು ಮನೆಗಳಲ್ಲಿ ಪೋರ್ನ್ ಫೀಲ್ಮ್ ಶೂಟ್ ಮಾಡಲಾಗಿದೆ. ಇಲ್ಲಿನ ಮನೆಗಳನ್ನು ಬಾಡಿಗೆಗೆ ತೆಗೆದುಕೊಂಡು ಶೂಟಿಂಗ್ ನಡೆಸಲಾಗುತ್ತದೆ.
ಸಾಮಾನ್ಯ ವಿಮಾ ಕ್ಷೇತ್ರದ ಪಿಎಸ್‌ಯು ನೌಕರರಿಗೆ ಗುಡ್ ನ್ಯೂಸ್
ಬಿಬಿಸಿಯ ಡಾಕ್ಯುಮೆಂಟರಿ “Ron Jeremy: Fall of a Porn Icon” ಅಲ್ಲಿ ಜಿಮ್ ಪಾವರ್ಸ್ ಅವರು ಸಾವಿರಾರು ಪೋರ್ನ್ ಚಿತ್ರಗಳಿಗೆ ಸಾಕ್ಷಿಯಾದ ಆ ಮನೆಯ ದೃಶ್ಯ ತೋರಿಸಿದ್ದಾರೆ. ಐಶಾರಾಮಿ ಮನೆಯಲ್ಲಿ ದೊಡ್ಡದಾದ ಲಿವಿಂಗ್ ರೂಮ್ ಇದೆ. ಮನೆಯ ಒಳಾಂಗಣವನ್ನು ತೋರಿಸುತ್ತ ಜಿಮ್ ‘ನಾನು ಈ ಮನೆಯನ್ನು ಜಿಮ್, ಸ್ಪಾ, ಲೈಬ್ರರಿಗಳಾಗಿ ಪರಿವರ್ತಿಸಿ ಶೂಟಿಂಗ್ ಮಾಡಿದ್ದೇನೆ’ ಎಂದು ಹೇಳಿದ್ದಾರೆ.
ಜಿಮ್ ಆ ವ್ಯಾಲಿಯ ಕುರಿತು ತಮ್ಮ ಅನೇಕ ಅನುಭವವನ್ನು ಹಂಚಿಕೊಂಡಿದ್ದಾರೆ. ಆ ಬಂಗಲೆಯ ಪ್ರತಿ ಕೋಣೆಯಲ್ಲೂ ಎಡಲ್ಟ್ ಮೂವಿಯ ಶೂಟಿಂಗ್ ನಡೆದಿದೆ. ಈ ಡಾಕ್ಯುಮೆಂಟರಿಯಲ್ಲಿ ನಾನು ಪೋರ್ನ್ ಮೂವಿ ನಿರ್ಮಾಣ ಮಾಡುವಾಗ ಆಗುವ ಕಷ್ಟಗಳು ಮತ್ತು ಲಾಭಗಳ ಬಗ್ಗೆ ಜನರಿಗೆ ಹೇಳಿದ್ದೇನೆ ಎಂದಿದ್ದಾರೆ.
ಜಿಮ್ ಮೇಲೆ ಈಗಾಗಲೇ 30 ಲೈಂಗಿಕ ಕಿರುಕುಳ ಕೇಸ್ ನಡೆಯುತ್ತಿವೆ. ಆದ್ರೆ ಜಿಮ್ ಈ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದಾರೆ.