ವಿಮಾನದಲ್ಲಿ ಪ್ರಯಾಣಿಸುವವರಿಗೆ ಖುಷಿಯ ಸುದ್ದಿಯೊಂದಿದೆ. ಇನ್ಮುಂದೆ ವಿದೇಶಕ್ಕೆ ಹೋಗುವುದು ಮತ್ತಷ್ಟು ಸುಲಭವಾಗಲಿದೆ. ನಿಮ್ಮ ನಗರದಿಂದಲೇ ನೇರವಾಗಿ ವಿದೇಶಕ್ಕೆ ಪ್ರಯಾಣ ಬೆಳೆಸಬಹುದಾಗಿದೆ. ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ,ಭಾರತದ ವಿವಿಧ ನಗರಗಳಿಂದ ವಿಶ್ವದ ಹಲವು ದೇಶಗಳಿಗೆ ತಡೆರಹಿತ ಅಂತರಾಷ್ಟ್ರೀಯ ವಿಮಾನ ಪ್ರಾರಂಭಿಸುವ ಘೋಷಣೆ ಮಾಡಿದೆ.
ಇದಲ್ಲದೆ ವಿಮಾನ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದೆ. ಟಿಕೆಟ್ ಕಾಯ್ದಿರಿಸುವ ಮೊದಲು, ಮುಂದಿನ ಪ್ರಯಾಣಕ್ಕರ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಕಂಪನಿ ಹೇಳಿದೆ. ಅಂದ್ರೆ ನೀವು ಪ್ರಯಾಣ ಬೆಳೆಸುವ ದೇಶದಲ್ಲಿ ಕೊರೊನಾ ನಿಯಮಗಳು ಏನಿದೆ ಎಂಬುದನ್ನು ಮೊದಲೇ ತಿಳಿದಿರಿ ಎಂದು ಕಂಪನಿ ಹೇಳಿದೆ.ಪ್ರಯಾಣಿಕರು ಏರ್ ಇಂಡಿಯಾದ ಅಧಿಕೃತ ವೆಬ್ಸೈಟ್ http://airindia.in ಗೆ ಭೇಟಿ ನೀಡುವ ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ.
ಏರ್ ಇಂಡಿಯಾ ಹೊಸ ಮಾರ್ಗ:
ಅಮೃತಸರ-ಲಂಡನ್
ಅಹಮದಾಬಾದ್ -ಲಂಡನ್
ಚೆನ್ನೈ – ಲಂಡನ್
ಬೆಂಗಳೂರು- ಲಂಡನ್
ತಿರುವನಂತಪುರ –ಮಾಲೆ
ಮುಂಬೈ- ಮಾಲೆ
ದೆಹಲಿ -ಟೊರೊಂಟೊ, ದೆಹಲಿ-ಸ್ಯಾನ್ ಫ್ರಾನ್ಸಿಸ್ಕೋ, ದೆಹಲಿ –ಚಿಕಾಗೋ
ಮುಂಬೈ- ನೆವಾರ್ಕ್
ದೆಹಲಿ-ವ್ಯಾಂಕೋವರ್
ಇಷ್ಟೇ ಅಲ್ಲದೆ ಏರ್ ಇಂಡಿಯಾ ದೇಶೀಯ ನೆಟ್ವರ್ಕ್ನಲ್ಲಿ ಅನೇಕ ತಡೆರಹಿತ ವಿಮಾನಗಳನ್ನು ಓಡಿಸುವುದಾಗಿ ಘೋಷಿಸಿದೆ. ಇದಕ್ಕಾಗಿ ಬುಕಿಂಗ್ ಸಹ ಶುರುವಾಗಿದೆ.
ಏರ್ ಇಂಡಿಯಾ ದೇಶಿಯ ವಿಮಾನ ಮಾರ್ಗ:
ಮುಂಬೈ- ಜಾಮ್ನಗರ
ಬೆಂಗಳೂರು – ಚೆನ್ನೈ
ದೆಹಲಿ-ವಿಜಯವಾಡ,
ದೆಹಲಿ -ವಿಶಾಖಪಟ್ಟಣಂ
ದೆಹಲಿ –ರಾಂಚಿ
ಮುಂಬೈ – ಮಂಗಳೂರು
ಮುಂಬೈ – ಅಮೃತಸರ
ಹೈದರಾಬಾದ್ -ತಿರುಪತಿ
ಹೈದರಾಬಾದ್ – ಕೋಲ್ಕತ್ತಾ