ಅಂತರ್ಜಾಲದಲ್ಲಿ ಕ್ರಿಯಾಶೀಲ ವಿಚಾರಗಳ ಸುದ್ದಿಗಳಿಗೇನೂ ಬರವಿಲ್ಲ. ವಿಶಿಷ್ಟವಾದ ಫ್ಯೂಶನ್ ಖಾದ್ಯಗಳಿಂದ ಹಿಡಿದು ಚಿತ್ರವಿಚಿತ್ರ ವಸ್ತ್ರ ವಿನ್ಯಾಸದವರೆಗೂ ಏನೇನೋ ಕಂಡು ಕೇಳರಿಯದ ವಿಷಯಗಳೆಲ್ಲಾ ನಮ್ಮ ಕಣ್ಣ ಮುಂದೆ ಹಾದು ಬರುತ್ತಿರುತ್ತವೆ.
ಪರಿಸರ ಸ್ನೇಹೀ ಐಡಿಯಾಗಳ ಬಗ್ಗೆ ಎಲ್ಲಾ ಕ್ಷೇತ್ರಗಳಲ್ಲೂ ಮಾತುಕತೆಗಳು ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಫ್ಯಾಶನ್ ಉದ್ಯಮವೂ ಇದಕ್ಕೆ ಹೊರತಾಗಿಲ್ಲ.
ವಿಚ್ಛೇದನದ ನಂತ್ರ ತಂದೆಗಿರಲ್ವಾ ಮಗು ಮೇಲೆ ಹಕ್ಕು…? ಹೈಕೋರ್ಟ್ ನಿಂದ ಮಹತ್ವದ ತೀರ್ಪು
ಕರಿದ ಚಿಕನ್ ಖಾದ್ಯಗಳ ದಿಗ್ಗಜ ರೆಸ್ಟೋರೆಂಟ್ ಚೈನ್ ಕೆಎಫ್ಸಿ ಅಭಿಮಾನಿಗಳ ಕಣ್ಣು ಅರಳಿಸುವ ಘಟನೆಯೊಂದರಲ್ಲಿ, ಹುಡುಗಿಯೊಬ್ಬಳು ಕೆಎಫ್ಸಿಯ ಪ್ಯಾಕೇಜ್ಗಳನ್ನೇ ಮರುಬಳಕೆ ಮಾಡಿಕೊಂಡು ಹೀಗೊಂದು ವಸ್ತ್ರ ವಿನ್ಯಾಸ ಸಿದ್ಧಪಡಿಸಿದ್ದಾಳೆ.
@NokuzothaNtuli ಎಂಬ ನೆಟ್ಟಿಗ ಈ ಚಿತ್ರವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ಕೆಎಫ್ಸಿಯ ದಕ್ಷಿಣ ಆಫ್ರಿಕಾ ಶಾಖೆ, “ಈ ಫ್ರೆಶ್ ಡ್ರಿಪ್ಗೆ ನಾವು ಸಿದ್ಧವೇ ಇರಲಿಲ್ಲ,” ಎಂದಿದೆ.
https://twitter.com/NokuzothaNtuli/status/1461041200299978753?ref_src=twsrc%5Etfw%7Ctwcamp%5Etweetembed%7Ctwterm%5E1461041200299978753%7Ctwgr%5E%7Ctwcon%5Es1_&ref_url=https%3A%2F%2Ffood.ndtv.com%2Fnews%2Fincredible-girl-makes-dress-with-recycled-kfc-packaging-fast-food-giant-reacts-2617238