ಬಾಲಿವುಡ್ ನಟ ಅಮೀರ್ ಖಾನ್ ಎರಡನೇ ಮದುವೆ ಮುರಿದು ಬಿದ್ದಿದೆ. ಕಿರಣ್ ರಾವ್ ಗೆ ವಿಚ್ಛೇದನ ನೀಡುವ ಘೋಷಣೆ ಮಾಡ್ತಿದ್ದಂತೆ ಅಭಿಮಾನಿಗಳು ದಂಗಾಗಿದ್ದರು.
ಬಾಲಿವುಡ್ ಬೆಸ್ಟ್ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಮೀರ್ – ಕಿರಣ್ ದೂರವಾಗ್ತಿರುವುದು ಅಭಿಮಾನಿಗಳಿಗೆ ಇಷ್ಟವಿರಲಿಲ್ಲ. ವಿಚ್ಛೇದನದ ಘೋಷಣೆ ಮಾಡಿದ್ದ ಅಮೀರ್, ಪತ್ನಿ ಕಿರಣ್ ರಾವ್ ಯಾವಾಗಲೂ ಒಳ್ಳೆಯ ಸ್ನೇಹಿತೆಯಾಗಿರ್ತಾರೆ ಎಂದಿದ್ದರು.
ಅಮೀರ್ ಮೊದಲು ರೀನಾ ದತ್ತಾ ಕೈ ಹಿಡಿದಿದ್ದರು. ಅಮೀರ್-ರೀನಾಗೆ ಇಬ್ಬರು ಮಕ್ಕಳು. ನಂತ್ರ 2005ರಲ್ಲಿ ನಿರ್ಮಾಪಕಿ ಕಿರಣ್ ರಾವ್ ಮದುವೆಯಾದ ಅಮೀರ್ ಗಂಡು ಮಗುವಿನ ತಂದೆ. ಅಮೀರ್ ವಿಚ್ಛೇದನ ಪಡೆಯುವುದಾಗಿ ಹೇಳ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಅಮೀರ್ ಖಾನ್ ಮೂರನೇ ಮದುವೆಯ ಚರ್ಚೆ ಶುರುವಾಗಿದೆ.
ಅಮೀರ್, ಬಹುನಿರೀಕ್ಷಿತ ಚಿತ್ರ ಲಾಲ್ ಸಿಂಗ್ ಚಡ್ಡಾ ಬಿಡುಗಡೆಗೆ ಸಿದ್ಧವಾಗ್ತಿದೆ. ಇದ್ರಲ್ಲಿ ಕರೀನಾ ಕಪೂರ್ ಖಾನ್ ಜೊತೆ ಅಮೀರ್ ಕಾಣಿಸಿಕೊಂಡಿದ್ದಾರೆ. ಈ ಮಧ್ಯೆ ಅಮೀರ್ ಮೂರನೇ ಮದುವೆಯ ಬಗ್ಗೆ ಚರ್ಚೆ ನಿರಂತರವಾಗಿ ನಡೆಯುತ್ತಿದೆ. ಅಮೀರ್ ಈ ಬಾರಿ ಯಾರನ್ನು ಮದುವೆಯಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.
ಲಾಲ್ ಸಿಂಗ್ ಚಡ್ಡಾ ಚಿತ್ರ ಬಿಡುಗಡೆ ನಂತ್ರ ಅಮೀರ್ ಮದುವೆಯಾಗುವ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬ ಸುದ್ದಿಯಿದೆ. ಚಿತ್ರಕ್ಕೆ ಯಾವುದೇ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ ಅಮೀರ್ ಮದುವೆ ವಿಷ್ಯ ಮುಂದೂಡಿದ್ದಾರೆ ಎನ್ನಲಾಗ್ತಿದೆ. ಚಿತ್ರ ಬಿಡುಗಡೆ ನಂತ್ರ ಅಮೀರ್ ಮೂರನೇ ಮದುವೆ ಘೋಷಣೆ ಮಾಡಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.