ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಓ) ಸದಸ್ಯರಿಗೆ ಇಲ್ಲೊಂದು ಮುಖ್ಯವಾದ ಅಪ್ಡೇಟ್ ಇದೆ. ಚಾಲ್ತಿಯಲ್ಲಿರುವ ನಾಮಿನಿ ಹೆಸರನ್ನು ಅಗತ್ಯವಿದ್ದಲ್ಲಿ ಬದಲಿಸುವ ಆಯ್ಕೆಯನ್ನು ಇಪಿಎಫ್ ಸದಸ್ಯರಿಗೆ ನೀಡಲಾಗಿದೆ.
ಇಪಿಎಫ್ ಹಾಗೂ ಇಪಿಎಸ್ಗೆ ಇ-ನಾಮಿನೇಷನ್ ಫೈಲ್ ಮಾಡಲು ಸದಸ್ಯರು ಕೆಳಕಂಡ ಕ್ರಮಗಳನ್ನು ಅನುಸರಿಸಬೇಕು.
1. ಇಪಿಎಫ್ಓ ಅಧಿಕೃತ ಜಾಲತಾಣ epfindia.gov.inಕ್ಕೆ ಭೇಟಿ ನೀಡಿ. ಬಳಿಕ ‘Service’ ಆಯ್ಕೆಯನ್ನು ಆರಿಸಿ. ನಂತರ ‘For Employees’ ಆಯ್ಕೆಯನ್ನು ಆರಿಸಿ. ಈಗ ‘Member UAN/ Online Service (OCS/OTP) ಮೇಲೆ ಕ್ಲಿಕ್ ಮಾಡಿ.
2. ಇದಾದ ಬಳಿಕ ನಿಮ್ಮ ಯುಎಎನ್ ಪಾಸ್ವರ್ಡ್ನೊಂದಿಗೆ ಲಾಗಿನ್ ಆಗಿ.
3. ‘ Manage Tab’ ಅಡಿ ‘E-nomination’ ಆಯ್ಕೆ ಮಾಡಿ.
ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಕಂದನ ಹೃದಯಸ್ಪರ್ಶಿ ವಿಡಿಯೋ
4. ಇದಾದ ಬಳಿಕ ‘E-nomination’ ಟ್ಯಾಬ್ ಸ್ಕ್ರೀನ್ ಮೇಲೆ ಕಾಣಸಿಗಲಿದೆ, ‘Save’ ಮೇಲೆ ಕ್ಲಿಕ್ ಮಾಡಿ.
5. update family declaration ಮೇಲೆ ‘Yes’ ಕ್ಲಿಕ್ ಮಾಡಬೇಕು.
6. ಇದಾದ ಬಳಿಕ ‘Add Family Details’ ಕ್ಲಿಕ್ ಮಾಡಿ. ಒಬ್ಬರಿಗಿಂತ ಹೆಚ್ಚಿನ ನಾಮಿನಿಗಳನ್ನು ಸೇರಿಸಬಹುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
7. ಇದಾದ ಬಳಿಕ ‘Nomination Details’ ಮೇಲೆ ಕ್ಲಿಕ್ ಮಾಡಿ ಶೇರ್ ಮಾಡಬೇಕಾದ ಒಟ್ಟಾರೆ ಮೊತ್ತವನ್ನು ಘೋಷಿಸಬೇಕು. ಬಳಿಕ ‘Save EPF Nomination’ ಮೇಲೆ ಕ್ಲಿಕ್ ಮಾಡಬೇಕು.
8. ಬಳಿಕ ‘E-sign’ ಮೇಲೆ ಕ್ಲಿಕ್ ಮಾಡಿ ಓಟಿಪಿ ಸೃಷ್ಟಿಸಿ, ಅದನ್ನು ಮೊಬೈಲ್ ಲಿಂಕ್ ಆಗಿರುವ ಆಧಾರ್ ಜೊತೆಗೆ ಸಲ್ಲಿಸಬೇಕು.