ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಸ್ವಚ್ಛ ಸವೇಕ್ಷಣ 2021ನೇ ಸಾಲಿನ ಅನ್ವಯ ದೇಶದ 342 ನಗರಗಳನ್ನು ಗೌರವಿಸಲಿದ್ದಾರೆ. ಸ್ವಚ್ಛ ಹಾಗೂ ಕಸ ಮುಕ್ತವಾಗಿರುವ ನಗರಗಳನ್ನು ಅಭಿನಂದಿಸುವ ಕಾರ್ಯಕ್ರಮ ಇದಾಗಿದೆ.
ಸ್ವಚ್ಛ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆಯೋಜಿಸುತ್ತಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಈ ಕಾರ್ಯಕ್ರಮದಲ್ಲಿ ಸ್ವಚ್ಛ ನಗರಗಳನ್ನು ಗೌರವಿಸುವುದು ಮಾತ್ರವಲ್ಲದೇ ಸಫಾಯಿಮಿತ್ರ ಸುರಕ್ಷಾ ಚಾಲೆಂಜ್ ಅಡಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಪೌರ ಕಾರ್ಮಿಕರನ್ನೂ ಗೌರವಿಸಲಾಗುತ್ತದೆ.
ಒಳಚರಂಡಿ ಹಾಗೂ ಸೆಪ್ಟಿಕ್ ಟ್ಯಾಂಕ್ಗಳನ್ನು ಯಾಂತ್ರೀಕೃತ ಮಾದರಿಯಲ್ಲಿ ಶುಚಿಗೊಳಿಸುವುದನ್ನು ಉತ್ತೇಜಿಸುವ ಸಲುವಾಗಿ ಹಾಗೂ ಅಪಾಯಕಾರಿ ಸ್ವಚ್ಛಗೊಳಿಸುವ ಕ್ರಮವನ್ನು ನಿಯಂತ್ರಿಸುವ ಸಲುವಾಗಿ ಸಚಿವಾಲಯ ಈ ಚಾಲೆಂಜ್ನ್ನು ಜಾರಿಗೆ ತಂದಿದೆ.
ಇದು ಸ್ವಚ್ಛ ಸರ್ವೇಕ್ಷಣದ ಆರನೇ ಆವೃತ್ತಿಯಾಗಿದೆ. ಅಲ್ಲದೇ ವಿಶ್ವದ ಅತೀದೊಡ್ಡ ನಗರ ಸ್ವಚ್ಛತಾ ಸಮೀಕ್ಷೆಯಾಗಿದೆ ಎಂದು ಸಚಿವಾಲಯ ಹೇಳಿದೆ.