ಪ್ರಕೃತಿಯ ಸಣ್ಣ ಸಣ್ಣ ವಿಷಯಗಳಲ್ಲೂ ವಿಸ್ಮಯಕಾರಿ ಅಂಶಗಳು ಅಡಗಿವೆ. ಇಂಥ ವಿಸ್ಮಯವೊಂದರ ವಿಡಿಯೋವೊಂದರಲ್ಲಿ ಕಂಬಳಿ ಹುಳುಗಳು ತಮ್ಮನ್ನು ರಕ್ಷಿಸಿಕೊಳ್ಳಲು ಮುಂದಾಗುತ್ತಿರುವುದನ್ನು ನೋಡಬಹುದು.
ಮರವೊಂದರ ಕಾಂಡದ ಮೇಲೆ ಕಂಬಳಿ ಹುಳುಗಳು ಸೇರಿಕೊಂಡು ಸಮೂಹ ಕಟ್ಟಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದಕ್ಕೆ ಕಾರಣವೂ ಅಷ್ಟೇ ಆಸಕ್ತಿಕರವಾಗಿದೆ.
ವೈರಲ್ ಆಗಿರುವ ಈ ವಿಡಿಯೋವನ್ನು ಸೆರೆ ಹಿಡಿಯುವ ವೇಳೆ ಕ್ಯಾಮೆರಾಮನ್ ಅವುಗಳ ಬಳಿ ಸದ್ದು ಮಾಡಿದರೆ ಕಂಬಳಿ ಹುಳುಗಳೆಲ್ಲಾ ಒಂದಾಗಿ ಪುಟಿದೇಳುತ್ತಿವೆ. ಈ ಪೋಸ್ಟ್ಗೆ ನೀಡಲಾದ ಕ್ಯಾಪ್ಷನ್ ಪ್ರಕಾರ, ಹೀಗೆ ಮಾಡುವುದರ ಮೂಲಕ ಕಂಬಳಿ ಹುಳುಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುಂದಾಗುತ್ತವೆ.
ಸಿಯಾಜ್, ಹ್ಯುಂಡೈ ವೆರ್ನಾಗೆ ಟಕ್ಕರ್ ನೀಡಲಿದೆ ಈ ಕಾರು
ಈ ರೀತಿಯ ಸಾಮುದಾಯಿಕ ಗುಚ್ಛಗಳ ಮೂಲಕ ದೊಡ್ಡದೊಂದು ಪ್ರಾಣಿಯಂತೆ ಒಟ್ಟಾಗಿ ಕಾಣುವ ಮೂಲಕ ತಮಗೆ ಅಪಾಯವೊಡ್ಡಬಲ್ಲ ಜೀವಿಗಳಿಗೆ ಭಯ ಮೂಡಿಸುವುದು ಸಹ ಕಂಬಳಿ ಹುಳುಗಳ ಪ್ಲಾನ್ ಆಗಿರುತ್ತದೆ.
“ನಾವು ಕಂಡಿರುವ ಅದ್ಭುತವಾದ ರಕ್ಷಣಾತ್ಮಕ ತಂತ್ರಗಾರಿಕೆಗಳಲ್ಲಿ ಒಂದು…! ಕಂಬಳಹುಳುಗಳ ಸಾಂಘಿಕ ಗುಚ್ಛಗಳು ಶಬ್ದಕ್ಕೆ ಬಹಳ ಸಂವೇದನಾಶೀಲವಾಗಿ ಪ್ರತಿಯೊಂದು ದನಿಗೂ ಪ್ರತಿಕ್ರಿಯಿಸುತ್ತವೆ. ಹಾರುವ ಕೀಟಗಳು ತಮ್ಮನ್ನು ಬೇಟೆಯಾಡಲು ನೋಡಿದಾಗ ಹೀಗೆ ಗುಚ್ಛಗಳನ್ನು ಸೃಷ್ಟಿಸುವ ಮೂಲಕ ಬೃಹತ್ ಗಾತ್ರದ ಪ್ರಾಣಿಯಂತೆ ಕಾಣಲು ಯತ್ನಿಸುತ್ತವೆ. ಕ್ಯಾಮೆರಾಮನ್ ದನಿ ಮಾಡುತ್ತಲೇ ಕಂಬಳಿಹುಳುಗಳೂ ಹೇಗೆ ಸದ್ದು ಮಾಡುತ್ತವೆ ಎಂದು ನೋಡಿ,” ಎಂದು ಪೋಸ್ಟ್ನ ಕ್ಯಾಪ್ಷನ್ನಲ್ಲಿ ವಿವರಿಸಲಾಗಿದೆ.