alex Certify 7.35 ಸೆಕೆಂಡ್‌ಗಳಲ್ಲಿ 10 ಮಾಸ್ಕ್ ಧರಿಸಿ ಗಿನ್ನಿಸ್ ವಿಶ್ವ ದಾಖಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

7.35 ಸೆಕೆಂಡ್‌ಗಳಲ್ಲಿ 10 ಮಾಸ್ಕ್ ಧರಿಸಿ ಗಿನ್ನಿಸ್ ವಿಶ್ವ ದಾಖಲೆ…!

ಈ ಗಿನ್ನೆಸ್ ದಾಖಲೆಗಳೇ ಹಾಗೆ. ಕಂಡು ಕೇಳರಿಯದ ವಿಚಾರಗಳನ್ನೆಲ್ಲಾ ಮಾಡಿ ದಾಖಲೆ ಪುಸ್ತಕ ಸೇರುವ ಮಂದಿಯ ಬಗ್ಗೆ ದಿನನಿತ್ಯ ಓದುತ್ತಲೇ ಇರುತ್ತೇವೆ.

ಕೋವಿಡ್ ಕಾಲದಲ್ಲಿರುವ ನಾವೆಲ್ಲಾ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುವ ಕಾರಣ ನಾವೆಲ್ಲಾ ಇದಕ್ಕೆ ರೂಢಿಯಾಗಿಬಿಟ್ಟಿದ್ದೇವೆ. ಕೆಲ ತಿಂಗಳ ಹಿಂದೆ ಹುಡುಗನೊಬ್ಬ ಕೆಲವೇ ಸೆಕೆಂಡ್‌ಗಳಲ್ಲಿ ಮಾಸ್ಕ್‌ಗಳನ್ನು ಧರಿಸುವ ಮೂಲಕ ದಾಖಲೆ ಸೃಷ್ಟಿಸಿದ್ದಾನೆ.

ತಪ್ಪು ಸ್ಥಳದಲ್ಲಿ ‘ಲಾಫಿಂಗ್ ಬುದ್ಧ’ನಿಟ್ಟರೆ ಬಡತನ ನಿಶ್ಚಿತ

ಜಾರ್ಜ್ ಪೀಲ್ ಹೆಸರಿನ ಈ ಹುಡುಗ 10 ಮಾಸ್ಕ್‌ಗಳನ್ನು ಕೇವಲ 7.35 ಸೆಕೆಂಡ್‌ಗಳಲ್ಲಿ ಧರಿಸಿದ್ದು, ಗಿನ್ನೆಸ್ ವಿಶ್ವ ದಾಖಲೆಯ ಪುಸ್ತಕ ಸೇರಿದ್ದಾನೆ. ಒಂದರ ಮೇಲೊಂದರಂತೆ ಹತ್ತು ಮಾಸ್ಕ್‌ಗಳನ್ನು ಈ ಬಾಲಕ ಧರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

“10 ಸರ್ಜಿಕಲ್ ಮಾಸ್ಕ್‌ಗಳನ್ನು ಧರಿಸಲು ತೆಗೆದುಕೊಂಡ ಅತ್ಯಂತ ಕಡಿಮೆ ಅವಧಿ, 7.35 ಸೆಕೆಂಡ್‌ಗಳು ಜಾರ್ಜ್ ಪೀಲ್‌ರಿಂದ,” ಎಂದು ವಿಡಿಯೋಗೆ ಕ್ಯಾಪ್ಷನ್ ಕೊಟ್ಟು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ ಗಿನ್ನೆಸ್ ವಿಶ್ವ ದಾಖಲೆಗಳ ಪ್ರೊಫೈಲ್.

https://youtu.be/AsyuUzrbNo8

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...