alex Certify ಮೊಮ್ಮಕ್ಕಳ ಕಾಳಜಿ ವಹಿಸಲು ಅಜ್ಜಿಯರಿಗಿಂತ ಉತ್ತಮ ವ್ಯಕ್ತಿಗಳಿಲ್ಲ: ಅಧ್ಯಯನದಲ್ಲಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಮ್ಮಕ್ಕಳ ಕಾಳಜಿ ವಹಿಸಲು ಅಜ್ಜಿಯರಿಗಿಂತ ಉತ್ತಮ ವ್ಯಕ್ತಿಗಳಿಲ್ಲ: ಅಧ್ಯಯನದಲ್ಲಿ ಬಹಿರಂಗ

ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಮೊಮ್ಮಕ್ಕಳೆಂದರೆ ಅಜ್ಜ-ಅಜ್ಜಿಯರಿಗೆ ಬಹಳ ಪ್ರೀತಿಯಿರುತ್ತದೆ. ಆದರೆ ಅದೆಷ್ಟೋ ಮಂದಿ ತಮ್ಮ ತಂದೆ-ತಾಯಿಗಳು ಭಾರ ಅಂತಾ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಅಂಥವರು ಈ ಸ್ಟೋರಿ ಓದಲೇಬೇಕು. ಯಾಕೆಂದ್ರೆ ಮೊಮ್ಮಕ್ಕಳನ್ನು ನೋಡಿಕೊಳ್ಳಲು ಅಜ್ಜಿಯರಿಗಿಂತ ಉತ್ತಮ ವ್ಯಕ್ತಿಗಳಿಲ್ಲ ಎಂದು ವಿಜ್ಞಾನಿಗಳೇ ತಿಳಿಸಿದ್ದಾರೆ.

ಅಜ್ಜ-ಅಜ್ಜಿ ಜೊತೆ ನಿಮ್ಮ ಮಗು ಬೆಳೆಯುತ್ತಿದ್ದರೆ, ನೀವು ಭಾರಿ ಅದೃಷ್ಟವಂತರು ಎಂಬುದನ್ನು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಯಾಕೆಂದರೆ ಇವರು ಬಲವಾದ ಪೋಷಣೆ ಪ್ರವೃತ್ತಿಯನ್ನು ಹೊಂದಿದ್ದಾರೆ ಮತ್ತು ತಮ್ಮ ಮೊಮ್ಮಕ್ಕಳ ಬಗ್ಗೆ ಆಳವಾಗಿ ಕಾಳಜಿ ವಹಿಸುತ್ತಾರೆ. ರಾಯಲ್ ಸೊಸೈಟಿ ಬಿ ಯಲ್ಲಿ ಪ್ರಕಟವಾದ ಹೊಸ ಅಧ್ಯಯನವು ಈ ಮಾಹಿತಿಯನ್ನು ಬಹಿರಂಗಪಡಿಸಿದೆ

ದಕ್ಷಿಣ ಯುಎಸ್ ರಾಜ್ಯ ಜಾರ್ಜಿಯಾದಲ್ಲಿನ ಎಮೋರಿ ವಿಶ್ವವಿದ್ಯಾಲಯದ ಸಂಶೋಧಕರು ಫಂಕ್ಷನಲ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ ಅನ್ನು ಬಳಸಿಕೊಂಡು, ಮೂರರಿಂದ 12 ವರ್ಷ ವಯಸ್ಸಿನ ತಮ್ಮ ಮೊಮ್ಮಕ್ಕಳ ಚಿತ್ರಗಳನ್ನು ತೋರಿಸಿರುವ 50 ಅಜ್ಜಿಯರ ಮೆದುಳನ್ನು ಸ್ಕ್ಯಾನ್ ಮಾಡಿದ್ದಾರೆ.

ವಿಶೇಷವಾಗಿ ಅವರು ತಮ್ಮ ಮೊಮ್ಮಕ್ಕಳ ಚಿತ್ರಗಳನ್ನು ವೀಕ್ಷಿಸುತ್ತಿರುವಾಗ, ಅವರು ನಿಜವಾಗಿಯೂ ಮೊಮ್ಮಗು ಯಾವ ಭಾವನೆ ವ್ಯಕ್ತಪಡಿಸುತ್ತದೆಯೋ ಅದೇ ರೀತಿಯ ಭಾವನೆಯನ್ನು ಹೊರಹಾಕಿದ್ದಾರೆ. ಅಂದರೆ, ಮಗು ಸಂತೋಷವನ್ನು ವ್ಯಕ್ತಪಡಿಸಿದ್ರೆ, ಅಜ್ಜಿಯರು ಕೂಡ ಖುಷಿಪಟ್ಟಿದ್ದಾರೆ. ಮಕ್ಕಳು ಸಂಕಟವನ್ನು ವ್ಯಕ್ತಪಡಿಸಿದಾಗ, ಅವರು ಕೂಡ ದುಃಖವನ್ನು ಹೊರಹಾಕಿದ್ದಾರೆ.

ಅಧ್ಯಯನದ ನೇತೃತ್ವ ವಹಿಸಿದ್ದ ಮಾನವಶಾಸ್ತ್ರಜ್ಞ ಮತ್ತು ನರವಿಜ್ಞಾನಿ ಜೇಮ್ಸ್ ರಿಲ್ಲಿಂಗ್, ಈ ಹಿಂದೆ ತಂದೆಯ ಮೇಲೆ ಇದೇ ರೀತಿಯ ಸಂಶೋಧನೆಗಳನ್ನು ನಡೆಸಿದ್ದರು. ಇದೀಗ ತಮ್ಮ ಮೊಮ್ಮಕ್ಕಳ ಬಗ್ಗೆ ಅಜ್ಜಿಯ ಕಲ್ಪನೆ ಹೇಗಿರುತ್ತದೆ ಎಂಬ ಬಗ್ಗೆ ಅವರು ತಮ್ಮ ಸಂಶೋಧನೆಯಿಂದ ಕಂಡುಕೊಂಡಿದ್ದಾರೆ.

ಅಂತಿಮವಾಗಿ, ತಂದೆಯ ಮೇಲೆ ಅವರು ನಡೆಸಿದ್ದ ಸಂಶೋಧನೆಯ ಫಲಿತಾಂಶಗಳೊಂದಿಗೆ ಹೊಸ ಅಧ್ಯಯನವನ್ನು ಹೋಲಿಸಿದಾಗ, ಒಟ್ಟಾರೆಯಾಗಿ ಅಜ್ಜಿಯರು ಭಾವನಾತ್ಮಕ ಪರಾನುಭೂತಿ ಹೊಂದಿರುತ್ತಾರೆ ಎಂದು ರಿಲ್ಲಿಂಗ್ ಕಂಡುಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...