alex Certify ‘ಕೃಷಿ ಮಸೂದೆ ಹಿಂಪಡೆದದ್ದು ನಾಚಿಕೆಗೇಡಿನ ಸಂಗತಿ’ : ಬಾಲಿವುಡ್​ ನಟಿ ಕಂಗನಾ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೃಷಿ ಮಸೂದೆ ಹಿಂಪಡೆದದ್ದು ನಾಚಿಕೆಗೇಡಿನ ಸಂಗತಿ’ : ಬಾಲಿವುಡ್​ ನಟಿ ಕಂಗನಾ ಕಿಡಿ

ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಬಾಲಿವುಡ್​ ನಟಿ ಕಂಗನಾ ರಣಾವತ್​ ಸೋಶಿಯಲ್​ ಮೀಡಿಯಾಗಳಲ್ಲಿ ಸದ್ದು ಮಾಡ್ತಿರ್ತಾರೆ. ತಮ್ಮ ಅಭಿಪ್ರಾಯಗಳನ್ನು ಅತ್ಯಂತ ಕಟುವಾಗಿ ಹೇಳುವ ರೀತಿಯಿಂದಲೇ ಕಂಗನಾ ಮನೆ ಮಾತಾಗಿದ್ದಾರೆ. ಇಂದು ಪ್ರಧಾನಿ ಮೋದಿ ಕೃಷಿ ಮಸೂದೆಯನ್ನು ಹಿಂದಕ್ಕೆ ಪಡೆಯುತ್ತಿರೋದಾಗಿ ಘೋಷಣೆ ಮಾಡಿದ್ದರು. ಈ ವಿಚಾರವಾಗಿಯೂ ಕಂಗನಾ ತಮ್ಮ ಎಂದಿನ ಸ್ಟೈಲ್​ನಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಬೀದಿಯಲ್ಲಿರುವ ಶಕ್ತಿಯೇ ಹೆಚ್ಚು ಶಕ್ತಿಯುತವಾಗಿದೆ. ರೈತರ ಪ್ರತಿಭಟನೆಯೂ ಇದನ್ನೇ ಸಾಬೀತು ಪಡಿಸಿದೆ ಎಂದು ನೆಟ್ಟಿಗರೊಬ್ಬರ ಪೋಸ್ಟ್​ನ್ನು ಶೇರ್​ ಮಾಡಿರುವ ನಟಿ ಕಂಗನಾ, ಬೇಸರ, ನಾಚಿಕೆಗೇಡು ಹಾಗೂ ಸಂಪೂರ್ಣ ಅನ್ಯಾಯ ಎಂದು ಬರೆದಿದ್ದಾರೆ.

ಬೀದಿಯಲ್ಲಿರುವ ಜನರು ಕಾನೂನು ರಚಿಸುತ್ತಿದ್ದಾರೆಯೇ ಹೊರತು ಸಂಸತ್​ನಲ್ಲಿರುವ ಸರ್ಕಾರವಲ್ಲ. ಇದು ಜಿಹಾದಿ ರಾಷ್ಟ್ರವಾಗಿದೆ. ಈ ರೀತಿಯ ರಾಷ್ಟ್ರವನ್ನು ಬಯಸಿದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದಿದ್ದಾರೆ.

ಇದು ಬೆಳಗ್ಗೆ ಗುರುನಾನಕ್​ ಜಯಂತಿ ಪ್ರಯುಕ್ತ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕೇಂದ್ರವು ಮೂರು ಕೃಷಿ ಕಾನೂನನ್ನು ಜಾರಿಗೆ ತಂದಿತ್ತು. ಸಾಕಷ್ಟು ಪ್ರಯತ್ನಗಳ ಬಳಿಕವೂ ದೇಶದ ಒಂದು ಭಾಗದ ರೈತರನ್ನು ಈ ಮಸೂದೆಗೆ ಒಪ್ಪಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕೃಷಿ ಮಸೂದೆಯನ್ನು ವಾಪಸ್​ ಪಡೆಯುತ್ತಿರೋದಾಗಿ ಹೇಳಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...