alex Certify ಹಾಡಹಗಲೇ ಮಹಿಳೆ ಮೇಲೆ ಜೆಸಿಬಿ ಹತ್ತಿಸಿ ಕೊಲೆಗೆ ಯತ್ನ..! ವೈರಲ್​ ಆಯ್ತು ಬೆಚ್ಚಿ ಬೀಳಿಸುವ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡಹಗಲೇ ಮಹಿಳೆ ಮೇಲೆ ಜೆಸಿಬಿ ಹತ್ತಿಸಿ ಕೊಲೆಗೆ ಯತ್ನ..! ವೈರಲ್​ ಆಯ್ತು ಬೆಚ್ಚಿ ಬೀಳಿಸುವ ವಿಡಿಯೋ

ಜೆಸಿಬಿ ಬಳಸಿ ಮಹಿಳೆಯನ್ನು ಕೊಲೆ ಮಾಡಲು ಯತ್ನಿಸುತ್ತಿರುವ ಬೆಚ್ಚಿ ಬೀಳಿಸುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ರಾಜಸ್ಥಾನದ ಬಾರ್ಮರ್​ನಲ್ಲಿ ಈ ಘಟನೆ ಸಂಭವಿಸಿದ್ದು ಪ್ರಾಣ ರಕ್ಷಣೆಗಾಗಿ ಮಹಿಳೆ ಕಲ್ಲು ಹಾಗೂ ಕೋಲುಗಳಿಂದ ಜೆಸಿಬಿಗೆ ಹಾನಿ ಉಂಟು ಮಾಡಿದ್ದಾರೆ.

ರಾಜಸ್ಥಾನದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ಬಿಜೆಪಿ ಕುಟುಕಿದೆ. ಪೊಲೀಸರು ಇದು ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಎಂದು ಹೇಳಿದ್ದಾರೆ.

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆ ಭುಗಿಲೆದ್ದಿತ್ತು. ಈ ಪ್ರಕರಣ ಸಂಬಂಧ 2 ಎಫ್​ಐಆರ್​ ಕೂಡ ದಾಖಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಬಾರ್ಮರ್​ನ ಎಸ್ಪಿ ದೀಪಕ್​ ಭಾರ್ಗವ್​ ಹೇಳಿದ್ದಾರೆ.

ಇತ್ತ ಬಿಜೆಪಿ ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದು ಮಹಿಳೆಯ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್​ ಜನರನ್ನು ಮೂರ್ಖರನ್ನಾಗಿಸಿದೆ ಎಂದು ಕಿಡಿಕಾರಿದೆ.

ಪ್ರಿಯಾಂಕಾ ಗಾಂಧಿ ‘ಲಡ್ಕಿ ಹೂ ಕಡ್​​ ಸಕ್ತಿ ಹೂ’( ನಾನು ಹುಡುಗಿ ಇದ್ದೇನೆ, ನಾನು ಹೋರಾಡಬಲ್ಲೆ) ಎಂದು ಹೇಳಿ ಉತ್ತರ ಪ್ರದೇಶದ ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ. ಆದರೆ ಕಾಂಗ್ರೆಸ್​ ಆಡಳಿತವಿರುವ ರಾಜಸ್ಥಾನದಲ್ಲಿ ಹಾಡಹಗಲೇ ಮಹಿಳೆಯ ಮೇಲೆ ಈ ರೀತಿಯಾಗಿ ದೈಹಿಕ ಹಲ್ಲೆ ನಡೆಸಲಾಗ್ತಿದೆ. ಇಲ್ಲಿನ ಜನರಿಗೆ ಕಾನೂನಿನ ಭಯವೇ ಇಲ್ಲ ಎಂಬಂತಾಗಿದೆ ಎಂದು ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಹೇಳಿದ್ರು.

— Priti Gandhi (Modi ka Parivar) (@MrsGandhi) November 18, 2021

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...