alex Certify ‘ಮನಿಕೆ ಮಗೆ ಹಿತೆ’ ಗೆ ನೃತ್ಯ ಮಾಡಿದ ಬೆಂಗಾಲಿ ನಟಿ ಶ್ರೀಲೇಖಾ ಮಿತ್ರಾ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮನಿಕೆ ಮಗೆ ಹಿತೆ’ ಗೆ ನೃತ್ಯ ಮಾಡಿದ ಬೆಂಗಾಲಿ ನಟಿ ಶ್ರೀಲೇಖಾ ಮಿತ್ರಾ: ವಿಡಿಯೋ ವೈರಲ್

ಸಿಂಹಳೀಯ ಹಾಡು ಮನಿಕೆ ಮಾಗೆ ಹಿತೆ ಹಲವಾರು ವಾರಗಳಿಂದ ದೇಸಿ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ನೀವು ಇಂಟರ್ನೆಟ್ ನಲ್ಲಿ ಸಕ್ರಿಯರಾಗಿದ್ದಾರೆ, ನಿಮಗಿದು ತಿಳಿದಿರಬಹುದು.

ಯೂಟ್ಯೂಬ್‌ನಲ್ಲಿ ಈಗ 182 ಮಿಲಿಯನ್ ವೀಕ್ಷಣೆಗಳನ್ನು ಹೊಂದಿರುವ ಹಾಡಿನ ವಿಡಿಯೋಗೆ ಸೆಲೆಬ್ರೆಟಿಗಳು, ಸಾಮಾನ್ಯರು ಸೇರಿದಂತೆ ಅನೇಕರು ಈ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಅಲ್ಲದೆ ಬೇರೆ ಭಾಷೆಯ ಆವೃತ್ತಿಯಲ್ಲೂ ಈ ಹಾಡನ್ನು ಹಾಡಲಾಗಿದೆ.

ಇದೀಗ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಅವರು ಮಾನಿಕೆ ಮ್ಯಾಗೆ ಹಿತೆ ಟ್ರೆಂಡ್‌ಗೆ ಇತ್ತೀಚಿನವರಾಗಿ ಸೇರ್ಪಡೆಗೊಂಡಿದ್ದಾರೆ. ಕೆಂಪು ಸ್ಲೀವ್‌ಲೆಸ್ ಕುರ್ತಿ ಧರಿಸಿದ ನಟಿ, ಹಾಡಿಗೆ ತಮ್ಮ ಮನೆಯ ಬಾಲ್ಕನಿಯಲ್ಲಿ ನೃತ್ಯ ಮಾಡಿದ್ದಾರೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ.

ಕೆಲವು ದಿನಗಳ ಹಿಂದೆ, ಹಿರಿಯ ವ್ಯಕ್ತಿಯೊಬ್ಬರು ಮನಿಕೆ ಮ್ಯಾಗೆ ಹಿತೆ ಸಾಹಿತ್ಯವನ್ನು ಹಾಸ್ಯಾಸ್ಪದವಾಗಿ ತಪ್ಪಾಗಿ ಉಚ್ಚರಿಸಿದ್ದಕ್ಕಾಗಿ ವೈರಲ್ ಆಗಿತ್ತು.

ಶ್ರೀಲಂಕಾದ ಗಾಯಕರಾದ ಯೋಹಾನಿ ದಿಲೋಕಾ ಡಿ ಸಿಲ್ವಾ ಹಾಡಿದ್ದಾರೆ. ಈ ಹಾಡು ಮೇ ತಿಂಗಳಲ್ಲಿ ಬಿಡುಗಡೆಯಾದ ನಂತರ ಸಾಕಷ್ಟು ಅಲೆಯನ್ನೇ ಸೃಷ್ಟಿಸಿದೆ. ದಿನೇದಿನೇ ಈ ಹಾಡಿನ ಕ್ರೇಜ್ ಹೆಚ್ಚುತ್ತಲೇ ಇದೆ.

ಇದರ ಅಗಾಧ ಯಶಸ್ಸು ತೆಲುಗು, ತಮಿಳು, ಹಿಂದಿ, ಪಂಜಾಬಿ, ನೇಪಾಳಿ, ಬೆಂಗಾಲಿ, ಭೋಜ್‌ಪುರಿ ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ವಿಭಿನ್ನ ಕಲಾವಿದರಿಂದ ಡಬ್ಬಿಂಗ್ ಆವೃತ್ತಿಗಳು ಲಗ್ಗೆಯಿಟ್ಟಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...