alex Certify ಪ್ರಪೋಸ್ ಮಾಡುವ ವೇಳೆ ಹೋಯ್ತು ಕರೆಂಟ್..! ಬಳಿಕ ಆಗಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಪೋಸ್ ಮಾಡುವ ವೇಳೆ ಹೋಯ್ತು ಕರೆಂಟ್..! ಬಳಿಕ ಆಗಿದ್ದೇನು ಗೊತ್ತಾ…?

ಪ್ರೇಮ ನಿವೇದನೆ ಮಾಡುವ ಮೊದಲು ಸಾಕಷ್ಟು ತಯಾರಿ ನಡೆಸಿರುತ್ತಾರೆ. ಪ್ರೇಮ ನಿವೇದನೆ ಸಮಯದಲ್ಲಿ ಯಾವುದೇ ತಪ್ಪಾಗದಿರಲಿ ಎಂದು ಎಲ್ಲ ಎಚ್ಚರಿಕೆ ತೆಗೆದುಕೊಂಡಿರುತ್ತಾರೆ. ಪ್ರಪೋಸ್ ಮಾಡಿದ ನಂತ್ರ ಇದನ್ನು ಒಪ್ಪಿಕೊಳ್ಳದೆ ಹೋದ್ರೆ ಎಂಬ ಭಯದ ಮಧ್ಯೆಯೇ ತಯಾರಿ ನಡೆದಿರುತ್ತದೆ.

ಎಲ್ಲ ಸಿದ್ಧತೆಯಾಗಿ, ಪ್ರಪೋಸ್ ಮಾಡುವ ವೇಳೆ ಕರೆಂಟ್ ಹೋಗಿ, ಯಡವಟ್ಟಾದ್ರೆ ಏನಾಗಬೇಡ ಹೇಳಿ ? ಬರೀ ಕರೆಂಟ್ ಹೋದ್ರೆ ತೊಂದರೆಯಿಲ್ಲ. ಕರೆಂಟ್ ಹೋದ ಸಂದರ್ಭದಲ್ಲಿ ಮಾಡಬೇಕಾದವರಿಗೆ ಪ್ರಪೋಸ್ ಮಾಡದೆ ಬೇರೆಯವರಿಗೆ ಮಾಡಿದ್ರೆ ?

ಯಸ್. ಇಂಥಹದ್ದೊಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕ, ಹುಡುಗಿಗೆ ಪ್ರಪೋಸ್ ಮಾಡಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಾನೆ. ಸ್ಟೇಜ್ ಮೇಲೆ ಮಂಡಿಯೂರಿ ಕುಳಿತು, ಹೂಗುಚ್ಛ ಹಿಡಿದು ಪ್ರಪೋಸ್ ಗೆ ಮುಂದಾಗ್ತಾನೆ. ಆಗ ಕರೆಂಟ್ ಹೋಗುತ್ತದೆ. ಕತ್ತಲಲ್ಲಿಯೇ ಹುಡುಗ ಪ್ರಪೋಸ್ ಮಾಡ್ತಾನೆ.

ಆದ್ರೆ ಕರೆಂಟ್ ಬಂದಾಗ ಗೊತ್ತಾಗುತ್ತೆ, ಪ್ರಪೋಸ್ ಮಾಡಿದ್ದು ಬೇರೆ ಹುಡುಗಿಗೆ ಎಂಬ ಸತ್ಯ. ಇದ್ರಿಂದ ಪೇಚಿಗೆ ಸಿಲುಕುವ ಹುಡುಗ ಮತ್ತೆ ತನ್ನ ಹುಡುಗಿಗೆ ಪ್ರಪೋಸ್ ಮಾಡ್ತಾನೆ. ಕೊನೆಯಲ್ಲಿ ಆಕೆ ಈತನ ಪ್ರೇಮ ನಿವೇದನೆಯನ್ನು ಒಪ್ಪಿಕೊಳ್ತಾಳೆ. ಕರೆಂಟ್ ಬರ್ತಿದ್ದಂತೆ ಯುವಕ ಮಾಡಿದ ಯಡವಟ್ಟು ನೋಡಿ, ಸ್ನೇಹಿತರು ನಗ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...