ಈಗ ಕಂಪನಿಗಳು ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಕಂಪನಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿವೆ. ಆಪಲ್, ಎಲೆಕ್ಟ್ರಿಕ್ ವಾಹನಗಳು ಮತ್ತು ಡ್ರೋನ್ ತಯಾರಿಸುತ್ತಿದೆ.
ಹಾಗೆ ಜಪಾನಿನ ಗೃಹೋಪಯೋಗಿ ಉಪಕರಣಗಳ ಕಂಪನಿ ಬಲ್ಮುಡಾ ಜಪಾನ್‌ನಲ್ಲಿ ಮೊದಲ ಸ್ಮಾರ್ಟ್‌ಫೋನ್ ಬಲ್ಮುಡಾ ಫೋನ್ ಅನಾವರಣಗೊಳಿಸಿದೆ. ಟೋಕಿಯೊದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಲ್ಮುಡಾ ಟೆಕ್ನಾಲಜೀಸ್, ಬಲ್ಮುಡಾ ಫೋನ್ ಬಿಡುಗಡೆ ಮಾಡಿದೆ.
ಫೋನ್ ವಿನ್ಯಾಸ ಸ್ವಲ್ಪ ವಿಭಿನ್ನವಾಗಿದೆ. ಫೋನ್‌ನ ಹಿಂಭಾಗವು ವಕ್ರವಾಗಿದೆ. 4.9-ಇಂಚಿನ ಡಿಸ್ಪ್ಲೇ ಹೊಂದಿರುವ ಫೋನ್ ಬೆಲೆ 900 ಡಾಲರ್ ಅಂದ್ರೆ 66 ಸಾವಿರ ರೂಪಾಯಿ. ಇದು ಜಪಾನಿನ ಮಾರುಕಟ್ಟೆಯಲ್ಲಿ ಮಿಡ್ ರೇಂಜರ್ ಆಗಿದೆ. 6ಜಿಬಿ ರ್ಯಾಮ್ ಮತ್ತು 128ಜಿಬಿ ಸ್ಟೋರೇಜ್ ನೊಂದಿಗೆ ಇದು ಮಾರುಕಟ್ಟೆಗೆ ಬರ್ತಿದೆ.
ಫೋನ್ ಹಿಂಭಾಗದಲ್ಲಿ 48ಎಂಪಿ ಪ್ರಾಥಮಿಕ ಕ್ಯಾಮರಾ ಮತ್ತು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದ್ದು, ಸೆಲ್ಫಿಗಾಗಿ 8ಎಂಪಿ ಕ್ಯಾಮರಾ ನೀಡಲಾಗಿದೆ. ಈ ಫೋನ್ ಗೆ 3,500 ಎಂಎಎಚ್ ಬ್ಯಾಟರಿ ನೀಡಲಾಗಿದೆ. ಹೊಸ ಸ್ಮಾರ್ಟ್‌ಫೋನ್‌ಗೆ ವೈರ್ಲೆಸ್ ಚಾರ್ಜಿಂಗ್ ಬೆಂಬಲ ನೀಡಲಾಗಿದೆ.