alex Certify ನಾಳೆ ಸಂಭವಿಸಲಿದೆ ದೊಡ್ಡ ಚಂದ್ರಗ್ರಹಣ: ಈ ರಾಶಿಯವರಿಡಿ ಎಚ್ಚರಿಕೆ ಹೆಜ್ಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ಸಂಭವಿಸಲಿದೆ ದೊಡ್ಡ ಚಂದ್ರಗ್ರಹಣ: ಈ ರಾಶಿಯವರಿಡಿ ಎಚ್ಚರಿಕೆ ಹೆಜ್ಜೆ

ನವೆಂಬರ್ 19 ಅಂದ್ರೆ ನಾಳೆ ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಚಂದ್ರಗ್ರಹಣ ಸಂಭವಿಸುತ್ತಿದೆ. ಇದನ್ನು ಕಾರ್ತಿಕ ಪೂರ್ಣಿಮಾ ಎಂದೂ ಕರೆಯುತ್ತಾರೆ. 580 ವರ್ಷಗಳ ನಂತರ ಸಂಭವಿಸುತ್ತಿರುವ ವಿಶೇಷ  ಚಂದ್ರಗ್ರಹಣವಾಗಿದ್ದು, ಅತಿ ದೊಡ್ಡ ಚಂದ್ರಗ್ರಹಣ ಎಂದು ನಂಬಲಾಗಿದೆ. ಗ್ರಹಣ ಸುಮಾರು ಮೂರೂವರೆ ಗಂಟೆ ಇರಲಿದೆ. ಭಾರತದಲ್ಲಿ ಈ ಚಂದ್ರಗ್ರಹಣವು ಮಧ್ಯಾಹ್ನ 12.48 ರಿಂದ 4.17 ನಿಮಿಷಗಳವರೆಗೆ ಇರಲಿದೆ.

ಇದು ಭಾಗಶಃ ಚಂದ್ರಗ್ರಹಣವಾಗಿದ್ದ ಕಾರಣ, ಗ್ರಹಣ ಸಮಯದಲ್ಲಿ ಯಾವುದೇ ಸೂತಕ ಇರುವುದಿಲ್ಲ. ಜ್ಯೋತಿಷಿಗಳ ಪ್ರಕಾರ ಈ ಚಂದ್ರಗ್ರಹಣದಿಂದ ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದು ಭಾಗಶಃ ಅಂದರೆ ನೆರಳು ಗ್ರಹಣವಾಗಿರುವುದರಿಂದ ಸೂತಕ ಕಾಲ ಇರುವುದಿಲ್ಲ. ಸಂಪೂರ್ಣ ಗ್ರಹಣ ಇರುವಾಗ ಮಾತ್ರ ಸೂತಕ ಅನ್ವಯಿಸುತ್ತದೆ. ಆದ್ರೆ ಈ ಗ್ರಹಣದಿಂದ ಎಲ್ಲ ರಾಶಿಗಳಲ್ಲೂ ಬದಲಾವಣೆಯಾಗಲಿದೆ.

ಈ ಬಾರಿ ವೃಷಭ ರಾಶಿಯಲ್ಲಿ ಚಂದ್ರಗ್ರಹಣ ಸಂಭವಿಸುತ್ತಿದೆ. ವೃಷಭ ರಾಶಿಯ ಜನರ ಮೇಲೆ ಗರಿಷ್ಠ ಪರಿಣಾಮವಾಗಲಿದೆ. ಕೃತಿಕಾ ನಕ್ಷತ್ರದಲ್ಲಿ ಚಂದ್ರಗ್ರಹಣ ನಡೆಯುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೃತಿಕಾ ನಕ್ಷತ್ರವನ್ನು ಸೂರ್ಯನ ನಕ್ಷತ್ರಪುಂಜ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಕೃತಿಕಾ ನಕ್ಷತ್ರದಲ್ಲಿ ಜನಿಸಿದವರು ಜಾಗರೂಕರಾಗಿರಬೇಕು.

ಚಂದ್ರಗ್ರಹಣದ ಪ್ರಭಾವ ಮೇಷ ರಾಶಿಯ ಮೇಲೆ ಹೆಚ್ಚಾಗಿ ಕಾಣಿಸಲಿದೆ. ಹಣ ಮತ್ತು ಆರೋಗ್ಯದ ವಿಷಯದಲ್ಲಿ ಈ ರಾಶಿಯವರು ಜಾಗರೂಕರಾಗಿರಬೇಕು. ಯಾವುದೇ ಕೆಲಸವನ್ನು ಅವಸರದಲ್ಲಿ ಮಾಡಬಾರದು.

ಇದಲ್ಲದೆ ವೃಷಭ ರಾಶಿಯ ಮೇಲೆ ಗ್ರಹಣದ ಪ್ರಭಾವ ಹೆಚ್ಚಿರುತ್ತದೆ. ತುಂಬಾ ಜಾಗರೂಕರಾಗಿರುವ ಅವಶ್ಯಕತೆಯಿದೆ ಚಾಲನೆ ಮಾಡುವಾಗ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಕೋಪ, ಅಹಂಕಾರ ಮತ್ತು ಗೊಂದಲದಿಂದ ದೂರವಿರುವುದು ಒಳ್ಳೆಯದು.

ಇನ್ನು ಸಿಂಹ ರಾಶಿಯವರು ಶಾಂತವಾಗಿರುವುದು ಒಳ್ಳೆಯದು. ಮಾತಿನಲ್ಲಿ ಹಿಡಿತವಿರಲಿ. ಸಿಕ್ಕ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬೇಡಿ.

ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 11.34ಕ್ಕೆ ಗ್ರಹಣ ಆರಂಭವಾಗಲಿದೆ. ಸಂಜೆ 5:33ಕ್ಕೆ ಮುಕ್ತಾಯವಾಗಲಿದೆ. ಗ್ರಹಣ ಭಾರತದಲ್ಲಿ ಸಂಭವಿಸದೆ ಇದ್ದರೂ ಗ್ರಹಣ ಕಾಲದಲ್ಲಿ ಸ್ನಾನ ಮಾಡಿ, ದೇವರ ಧ್ಯಾನ ಮಾಡುವುದು ಒಳ್ಳೆಯದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...