ಕೇಂದ್ರ ವಿತ್ತ ಸಚಿವಾಲಯದ ರಾಜ್ಯ ಖಾತೆ ಸಚಿವ ಡಾ. ಭಗ್ವತ್ ಕರದ್ ಮಾನವೀಯ ಸ್ಪಂದನೆಯೊಂದರ ಮೂಲಕ ಸುದ್ದಿ ಮಾಡಿದ್ದಾರೆ.
ದೆಹಲಿಯಿಂದ ಮುಂಬಯಿಗೆ ತಾವು ಪ್ರಯಾಣಿಸುತ್ತಿದ್ದ ಫ್ಲೈಟ್‌ನಲ್ಲಿ ಸಹ ಪ್ರಯಾಣಿಕರೊಬ್ಬರು ಅನಾರೋಗ್ಯದಿಂದ ತಲೆಸುತ್ತು ಬಂದು ಬೀಳುತ್ತಿದ್ದಾಗ ಅವರ ನೆರವಿಗೆ ಧಾವಿಸಿದ್ದಾರೆ.
ದೆಹಲಿಯಿಂದ ಮುಂಬಯಿಗೆ ಹೊರಟಿದ್ದ ಇಂಡಿಗೋ ಫ್ಲೈಟ್‌ನಲ್ಲಿ ಪ್ರಯಾಣಿಕರೊಬ್ಬರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯವಿದೆ ಎಂದು ವಿಮಾನ ಸಿಬ್ಬಂದಿ ಘೋಷಿಸಿದ್ದಾರೆ. ತೀವ್ರ ಸುಸ್ತು ಎಂದ ಹೈಪೋಟೆನ್ಷನ್ ಪೀಡಿತ ಪ್ರಯಾಣಿಕನ ನೆರವಿಗೆ ಸಚಿವರು ಕೂಡಲೇ ಧಾವಿಸಿದ್ದಾರೆ.
ಶಾಲೆ ತೊರೆದ 60 ವರ್ಷಗಳ ನಂತರ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿದ 77ರ ವೃದ್ಧೆ..!
ವೃತ್ತಿಯಲ್ಲಿ ಪೆಡಿಯಾಟ್ರಿಕ್ ವೈದ್ಯರಾಗಿರುವ ಡಾ. ಕರದ್ ಅವರು ತ್ವರಿತವಾಗಿ ಸ್ಪಂದಿಸಿದ ಪರಿಯನ್ನು ಇಂಡಿಗೋ ಆಡಳಿತ ಪ್ರಶಂಸಿಸಿದೆ. ವಿಮಾನದಲ್ಲಿ ನಡೆದ ಘಟನೆಯ ಕುರಿತು ಟ್ವೀಟ್ ಮಾಡಿದ ಸಚಿವರ ಟ್ವೀಟ್ ಅನ್ನು ಇಂಡಿಗೋ ವಿಮಾನಯಾನ ಸಂಸ್ಥೆ ತನ್ನ ಹ್ಯಾಂಡಲ್ ಮೂಲಕ ಶೇರ್ ಮಾಡಿಕೊಂಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹ ಖುದ್ದು ಸಚಿವರನ್ನು ಶ್ಲಾಘಿಸಿದ್ದು, ಟ್ವಿಟರ್‌ನಲ್ಲಿ ತಮ್ಮ ವೈಯಕ್ತಿಕ ಖಾತೆಯ ಮೂಲಕ ಮೆಚ್ಚಿ ಕೊಂಡಾಡಿದ್ದಾರೆ.
“ಇವರು ಯಾವಾಗಲೂ ಹೃದಯದಿಂದ ವೈದ್ಯರು. ನನ್ನ ಸಹೋದ್ಯೋಗಿಯಿಂದ ಶ್ರೇಷ್ಠ ಕಾರ್ಯ,” ಎಂದು ಮೋದಿ ಟ್ವೀಟ್ ಮಾಡಿದ್ದು, ಇಂಡಿಗೋದ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ.