alex Certify ವಿಮಾನ ನಿಲ್ದಾಣದಲ್ಲೇ ‘ಮದ್ಯ’ ಹಂಚಿಕೊಂಡ ಯುವತಿಯರು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ನಿಲ್ದಾಣದಲ್ಲೇ ‘ಮದ್ಯ’ ಹಂಚಿಕೊಂಡ ಯುವತಿಯರು: ವಿಡಿಯೋ ವೈರಲ್

ಫ್ಲೋರಿಡಾ: ನಮ್ಮಲ್ಲಿ ಪರಸ್ಪರ ಹಂಚಿ ತಿನ್ನಬೇಕು ಅನ್ನೋ ಮಾತಿದೆ. ನಮ್ಮ ಜೊತೆ ಇರುವ ಸ್ನೇಹಿತರನ್ನೋ ಅಥವಾ ಸಂಬಂಧಿಕರನ್ನೋ ಬಿಟ್ಟು ನಾವೊಬ್ಬರೆ ಕುಳಿತು ತಿನ್ನುವುದು ಏನು ಚೆನ್ನಾಗಿರುತ್ತದೆ ಹೇಳಿ..? ಹಾಗೆಯೇ ಇಲ್ಲೊಂದು ಯುವತಿಯರ ಗುಂಪು ಈ ನಿಯಮವನ್ನು ಚೆನ್ನಾಗಿ ಪಾಲಿಸಿದಂತಿದೆ. ವಿಮಾನ ನಿಲ್ದಾಣದಲ್ಲಿ ಆಲ್ಕೋಹಾಲ್ ಕುಡಿಯುತ್ತಾ ಪರಸ್ಪರ ವಿನಿಮಯ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಅಮೆರಿಕಾದ ಫ್ಲೋರಿಡಾದಿಂದ ಮಿಯಾಮಿಗೆ ತೆರಳುತ್ತಿದ್ದ ಸ್ನೇಹಿತೆಯರ ಗುಂಪೊಂದು ವೊಡ್ಕಾ ಬಾಟಲಿ ಹಿಡಿದುಕೊಂಡಿದ್ದರು. ಆದರೆ, ಚೆಕ್ ಇನ್ ನಲ್ಲಿ ಇವರಲ್ಲಿದ್ದ ಎರಡು ಆಲ್ಕೋಹಾಲ್ ಬಾಟಲ್ ಗೆ ಅನುಮತಿ ಸಿಗಲಿಲ್ಲ. ಇದರಿಂದ ವೇಸ್ಟ್ ಮಾಡೋದು ಏನಕ್ಕೆ ಎಂದುಕೊಂಡ ಯುವತಿಯರು, ಬಾಟಲಿಯಿಂದ ಆಲ್ಕೋಹಾಲ್ ಸೇವಿಸುತ್ತಾ ಒಬ್ಬರಿಂದ ಮತ್ತೊಬ್ಬರಿಗೆ ವಿನಿಮಯ ಮಾಡಿದ್ದಾರೆ.

ಗೋಮೂತ್ರ – ಸಗಣಿ ಸೇವನೆಯಿಂದ ದೇಹಾತ್ಮಗಳ ಶುದ್ಧಿ ಸಾಧ್ಯವೆಂದ ವೈದ್ಯ

ಘಟನೆಯ ವಿಡಿಯೊವನ್ನು ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ, ಯುವತಿಯೊಬ್ಬಳು ಸಿರೊಕ್ ವೋಡ್ಕಾ ಬಾಟಲಿಯ ಮದ್ಯ ಕುಡಿಯುತ್ತಿರುವುದನ್ನು ನೋಡಬಹುದು. ಒಂದು ಸಿಪ್ ಕುಡಿದ ಕೂಡಲೇ ಅದನ್ನು ಮತ್ತೊಬ್ಬಾಕೆ ರವಾನಿಸಿದ್ದಾಳೆ. ಪ್ರಯಾಣಿಕರು ಮದ್ಯವನ್ನು ತಮ್ಮಲ್ಲೇ ಹಂಚಿಕೊಳ್ಳುತ್ತಿರುವುದನ್ನು ನೋಡಿದ ಭದ್ರತಾ ಸಿಬ್ಬಂದಿ ನಕ್ಕಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 12 ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹೆಚ್ಚಿನ ನೆಟ್ಟಿಗರು ಮಹಿಳೆಯರನ್ನು ಶ್ಲಾಘಿಸಿದರೆ, ಕೆಲವರು ಯುವತಿಯರು ಮಾಸ್ಕ್ ತೆಗೆದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

https://www.youtube.com/watch?v=eiOdnWvF02Y&t=1s

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...