alex Certify ಚುನಾವಣೆ ಹೊಸ್ತಿಲಲ್ಲಿ SP – BSP ಗೆ ಬಿಗ್ ಶಾಕ್: ಬಿಜೆಪಿ ಸೇರ್ಪಡೆಗೆ ಮುಂದಾದ ಹತ್ತಕ್ಕೂ ಅಧಿಕ ಶಾಸಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣೆ ಹೊಸ್ತಿಲಲ್ಲಿ SP – BSP ಗೆ ಬಿಗ್ ಶಾಕ್: ಬಿಜೆಪಿ ಸೇರ್ಪಡೆಗೆ ಮುಂದಾದ ಹತ್ತಕ್ಕೂ ಅಧಿಕ ಶಾಸಕರು

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ಬಿಎಸ್​ಪಿ ಹಾಗೂ ಎಸ್ಪಿ ಪಕ್ಷಕ್ಕೆ ಭಾರೀ ಹಿನ್ನಡೆಯುಂಟಾಗಿದೆ. 2022ರ ವಿಧಾನಸಭಾ ಚುನಾವಣೆಗೂ ಮುನ್ನ ಎಸ್ಪಿ ಹಾಗೂ ಬಿಎಸ್ಪಿ ಪಕ್ಷದ ಸುಮಾರು 10 ಎಂಎಲ್​ಸಿಗಳು ಆಢಳಿತಾರೂಢ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಎಸ್ಪಿ ಹಾಗೂ ಬಿಎಸ್ಪಿಯ ಶಾಸಕರು ಮತ್ತು ಎಂಎಲ್ಸಿಗಳನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಸೇರ್ಪಡೆ ಸಮಿತಿಯ ಎದುರು ಮಾತನಾಡಲಾಗಿದೆ.

ಎಸ್ಪಿಯ ರವಿಶಂಕರ್​ ಸಿಂಗ್​ ಪಪ್ಪು, ಅಕ್ಷಯ್​ ಪ್ರಸಾದ್​ ಸಿಂಗ್​, ಸಿ.ಪಿ. ಚಂದ್, ರಾಮ ನಿರಂಜನ್​, ನರೇಂದ್ರ ಭಾಟಿ ಹಾಗೂ ಬಿಎಸ್ಪಿಯ ಬ್ರಜೇಶ್​ ಕುಮಾರ್​ ಸಿಂಗ್​, ಪ್ರಿನ್ಸೂ ಸೇರಿದಂತೆ 10 ಮಂದಿಯನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಸೇರ್ಪಡೆ ಸಮಿತಿ ಅನುಮೋದನೆ ನೀಡಿದೆ. ಈ ಎಲ್ಲಾ ನಾಯಕರು ಬಿಜೆಪಿಯ ಸದಸ್ಯತ್ವವನ್ನು ಪಡೆಯಲಿದ್ದಾರೆ.

ಎಸ್ಪಿ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿರುವ ನಾಯಕರಲ್ಲಿ ಬಹುತೇಕರು ಪುರಸಭೆ ವ್ಯಾಪ್ತಿಯ ಎಂಎಲ್ಎ ಎಂದು ಮೂಲಗಳು ತಿಳಿಸಿವೆ. ಇವರಿಗೆ ಮುಂಬರುವ ವಿಧಾನ ಪರಿಷತ್​ ಪುರಸಭೆ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿ ಸ್ಥಾನ ನೀಡಲು ಬಿಜೆಪಿ ಪರೋಕ್ಷ ಒಪ್ಪಿಗೆ ನೀಡಿದೆ ಎನ್ನಲಾಗಿದೆ.

ಎಸ್ಪಿ ಹಾಗೂ ಬಿಎಸ್ಪಿ ನಾಯಕರನ್ನು ಬಿಜೆಪಿಗೆ ಸೆಳೆಯುವಲ್ಲಿ ಉಪಮುಖ್ಯಮಂತ್ರಿ ಡಾ. ದಿನೇಶ್​ ಶರ್ಮಾ ಹಾಗೂ ಬಿಜೆಪಿ ಉಪಾಧ್ಯಕ್ಷ ದಯಾಶಂಕರ್​ ಸಿಂಗ್​ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ 2022ರ ಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸಲಿದೆ ಎನ್ನಲಾಗಿದೆ. ಈ ನಾಯಕರನ್ನು ಹೊರತುಪಡಿಸಿ ಇನ್ನೂ ಅನೇಕರು ಶಾಸಕರೂ ಸಹ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...