
ಕೊರೊನಾ ನಂತ್ರ ಸ್ವಂತ ವ್ಯವಹಾರಕ್ಕೆ ಬೇಡಿಕೆ ಹೆಚ್ಚಾಗಿದೆ. ನೀವೂ ವ್ಯವಹಾರದ ಯೋಚನೆಯಲ್ಲಿದ್ದರೆ ಮಸಾಲೆ ಪದಾರ್ಥದ ಬ್ಯುಸಿನೆಸ್ ಶುರು ಮಾಡಬಹುದು. ಕಡಿಮೆ ಬಂಡವಾಳದಲ್ಲಿಯೇ ಹೆಚ್ಚು ಗಳಿಸುವ ವ್ಯವಹಾರಗಳಲ್ಲಿ ಇದೂ ಒಂದು.
ಭಾರತದಲ್ಲಿ ಸದಾ ಮಸಾಲೆ ಪದಾರ್ಥಗಳಿಗೆ ಬೇಡಿಕೆಯಿದೆ. ನಿಮಗೆ ಸ್ವಲ್ಪ ರುಚಿಯ ಬಗ್ಗೆ ಮಾಹಿತಿಯಿದ್ದರೆ ನೀವು ಮಸಾಲೆ ಪದಾರ್ಥ ಸಿದ್ಧಪಡಿಸಿ, ಮಾರಾಟ ಮಾಡಬಹುದು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವರದಿಯಲ್ಲಿ ಮಸಾಲೆ ತಯಾರಿಕೆ ಘಟಕ ಸ್ಥಾಪನೆಗೆ ಸಂಪೂರ್ಣ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಈ ವರದಿ ಪ್ರಕಾರ ಮಸಾಲೆ ತಯಾರಿಕೆ ಘಟಕ ಸ್ಥಾಪನೆಗೆ 3.50 ಲಕ್ಷ ರೂಪಾಯಿ ಬೇಕಾಗುತ್ತದೆ. ಪ್ರಧಾನ ಮಂತ್ರಿಗಳ ಉದ್ಯೋಗ ಯೋಜನೆಯಡಿ ಈ ವ್ಯವಹಾರಕ್ಕೆ ಸಾಲ ಪಡೆಯಬಹುದು.
ಮಾಸ್ಟರ್ ಬ್ಲಾಸ್ಟರ್ ಚೊಚ್ಚಲ ಪಂದ್ಯವಾಡಿದ ಅಪರೂಪದ ಟಿಕೆಟ್ ಹಂಚಿಕೊಂಡ ಅಭಿಮಾನಿ
ಯೋಜನಾ ವರದಿ ಪ್ರಕಾರ ವಾರ್ಷಿಕ 193 ಕ್ವಿಂಟಾಲ್ ಮಸಾಲೆ ಪದಾರ್ಥಗಳನ್ನು ಉತ್ಪಾದಿಸಬಹುದು. ಇದರಲ್ಲಿ ಪ್ರತಿ ಕ್ವಿಂಟಲ್ ಗೆ 5400 ರೂಪಾಯಿಯಂತೆ ಒಂದು ವರ್ಷದಲ್ಲಿ ಒಟ್ಟು 10.42 ಲಕ್ಷ ರೂಪಾಯಿ ವ್ಯವಹಾರ ನಡೆಸಬಹುದು. ಎಲ್ಲ ಖರ್ಚು ಕಳೆದರೆ ವಾರ್ಷಿಕ 2.54 ಲಕ್ಷ ಲಾಭ ಬರಲಿದೆ. ಅಂದರೆ ತಿಂಗಳಿಗೆ 21 ಸಾವಿರ ರೂಪಾಯಿಗೂ ಹೆಚ್ಚು ಲಾಭ ಪಡೆಯಬಹುದು.
ಖರ್ಚು ಕಡಿಮೆ ಮಾಡಬೇಕೆಂದ್ರೆ ನೀವು, ಜಾಗವನ್ನು ಬಾಡಿಗೆ ಪಡೆಯುವ ಬದಲು, ಸ್ವಂತ ಜಾಗದಲ್ಲಿ ಶುರು ಮಾಡಬಹುದು. ನಿಮ್ಮ ಉತ್ಪನ್ನದ ಗುಣಮಟ್ಟ, ರುಚಿ ಹಾಗೂ ಆಕರ್ಷಕ ಡಿಸೈನ್ ಎಲ್ಲವೂ ಮಹತ್ವ ಪಡೆಯುತ್ತದೆ. ಹೆಚ್ಚು ಪ್ರಚಾರ ಮಾಡಿದಲ್ಲಿ ನೀವು ಹೆಚ್ಚು ಗಳಿಸಬಹುದು.