alex Certify ಶಿರಡಿ ಭಕ್ತಾದಿಗಳಿಗೆ ಗುಡ್​ ನ್ಯೂಸ್​: ಆಫ್​ಲೈನ್​ ವ್ಯವಸ್ಥೆ ಮೂಲಕವೂ ಸಾಯಿಬಾಬನ ದರ್ಶನಕ್ಕೆ ಗ್ರೀನ್​ ಸಿಗ್ನಲ್​…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿರಡಿ ಭಕ್ತಾದಿಗಳಿಗೆ ಗುಡ್​ ನ್ಯೂಸ್​: ಆಫ್​ಲೈನ್​ ವ್ಯವಸ್ಥೆ ಮೂಲಕವೂ ಸಾಯಿಬಾಬನ ದರ್ಶನಕ್ಕೆ ಗ್ರೀನ್​ ಸಿಗ್ನಲ್​…..!

ಕೋವಿಡ್​ 19 ಸೋಂಕಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಮುಖ ಕಂಡು ಬರ್ತಿರೋದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಅಹಮದ್​ನಗರ ಜಿಲ್ಲೆಯ ಆಡಳಿತ ಮಂಡಳಿ ಶಿರಡಿಯ ಸಾಯಿಬಾಬಾ ಮಂದಿರಕ್ಕೆ ಪ್ರತಿ ದಿನ 10 ಸಾವಿರ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲು ನಿರ್ಧರಿಸಿದೆ. ಜಿಲ್ಲಾಡಳಿತವು ಅಕ್ಟೋಬರ್​ 6ರಂದು ಆನ್​ಲೈನ್​ ಪಾಸ್​ ಹೊಂದಿರುವ 15 ಸಾವಿರ ಭಕ್ತರಿಗೆ ಪ್ರತಿದಿನ ದೇಗುಲ ದರ್ಶನ ಮಾಡಲು ಅನುಮತಿ ನೀಡಿತ್ತು. ಇದೀಗ ಆಫ್​ಲೈನ್​ ಪಾಸ್​ ಹೊಂದಿರುವ ಭಕ್ತರಿಗೂ ಅವಕಾಶ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಒಟ್ಟು 25 ಸಾವಿರ ಭಕ್ತರು ಪ್ರತಿದಿನ ಸಾಯಿಬಾಬಾ ದರ್ಶನವನ್ನು ಪಡೆಯಬಹುದಾಗಿದೆ.

ಸಭೆಯಲ್ಲಿ ಕೈಗೊಂಡ ನಿರ್ಧಾರದ ಪ್ರಕಾರ ಸಾಯಿಬಾಬಾ ದೇವಾಲಯ ಟ್ರಸ್ಟ್​​ ಎಲ್ಲಾ ಕೋವಿಡ್​ ಮಾರ್ಗಸೂಚಿಗಳನ್ನು ಪಾಲಿಸುತ್ತಾ ಆಫ್​ಲೈನ್​ ವ್ಯವಸ್ಥೆಯ ಮೂಲಕ ಪ್ರತಿದಿನ 10 ಸಾವಿರ ಭಕ್ತರಿಗೆ ದೇಗುಲ ದರ್ಶನಕ್ಕೆ ಅವಕಾಶ ನೀಡುತ್ತಿದೆ ಎಂದು ಅಹಮದ್​ನಗರ ಜಿಲ್ಲಾಧಿಕಾರಿ ರಾಜೇಂದ್ರ ಭೋಸ್ಲೆ ಆದೇಶ ಹೊರಡಿಸಿದ್ದಾರೆ. ದೇವಾಲಯದ ಟ್ರಸ್ಟ್​ ಜಿಲ್ಲಾಡಳಿತ ಹಾಗೂ ಮಹಾರಾಷ್ಟ್ರ ಸರ್ಕಾರದ ಎಲ್ಲಾ ಕೋವಿಡ್​ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ಕೋವಿಡ್​ ಪರಿಸ್ಥಿತಿಗೂ ಮುನ್ನ ಪ್ರತಿ ದಿನ ಲಕ್ಷಕ್ಕೂ ಅಧಿಕ ಮಂದಿ ಶಿರಡಿ ಸಾಯಿಬಾಬಾ ದರ್ಶನಕ್ಕೆ ಆಗಮಿಸುತ್ತಿದ್ದರು. ಆಫ್​ಲೈನ್​ ವ್ಯವಸ್ಥೆಯ ಮೂಲಕ ದೇಗುಲ ದರ್ಶನ ಮಾಡುವವರು ಆಧಾರ್​ ಕಾರ್ಡ್ ತೋರಿಸುವುದು ಕಡ್ಡಾಯವಾಗಿದೆ. ಉಚಿತ ಆಫ್​ಲೈನ್​ ಪಾಸ್​ಗಳನ್ನು ನೀಡಲು ಪ್ರತ್ಯೇಕ ಕೌಂಟರ್​ ಸ್ಥಾಪನೆ ಮಾಡುತ್ತೇನೆ ಎಂದು ದೇವಾಲಯದ ಟ್ರಸ್ಟ್​ ಮಾಹಿತಿ ನೀಡಿದೆ.

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 886 ಹೊಸ ಕೋವಿಡ್ ಪಾಸಿಟಿವ್​ ಪ್ರಕರಣಗಳು ವರದಿಯಾಗಿದೆ. ಒಂದು ದಿನದಲ್ಲಿ 34 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...