ಶ್ರೀನಗರ: ಪೊಲೀಸ್ ಅಧೀಕ್ಷಕರ ಬೆಂಗಾವಲು ವಾಹನ ಸ್ಕಿಡ್ ಆಗಿ ನದಿಗೆ ಬಿದ್ದು ಇಬ್ಬರು ಪೊಲೀಸ್ ಅಧಿಕಾರಿಗಳು ಮೃತಪಟ್ಟಿರುವ ಘಟನೆ ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
ಪೂಂಚ್ ನ ಬಫ್ಲಿಯಾಜ್ ಪ್ರದೇಶದಲ್ಲಿರುವ ಡ್ರೋಗ್ಜಿಯನ್ ಎಂಬ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೆಂಗಾವಲು ವಾಹನ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದೆ. ಗಂಭೀರವಾಗಿ ಗಾಯಗೊಂಡಿದ್ದ 6 ಪೊಲೀಸ್ ಸಿಬ್ಬಂದಿಗಳನ್ನು ತಕ್ಷಣ ಸುರನ್ ಕೋಟೆಯ ಉಪ-ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮುಂದಿನ ಆದೇಶದವರೆಗೆ ಶಾಲೆ, ಕಾಲೇಜ್ ಬಂದ್ ಮಾಡಲು ತುರ್ತುಸಭೆಯಲ್ಲಿ ನಿರ್ಧಾರ: ದೆಹಲಿ ವಾಯುಮಾಲಿನ್ಯ ತಡೆಗೆ ಮಹತ್ವದ ಕ್ರಮ
ವಿಭಾಗೀಯ ಪೊಲೀಸ್ ಆಯುಕ್ತ ರಾಘವ ಲಾಗರ್ ಜಮ್ಮುವಿಗೆ ಭೇಟಿ ನೀಡಿದ್ದರು. ಅವರಿಗೆ ಭದ್ರತೆ ನೀಡಲು ಪೂಂಚ್ ಎಸ್ ಎಸ್ ಪಿ ವಿನೋದ್ ಕುಮಾರ್ ನೇತೃತ್ವದ ತಂಡ ಭೇಟಿ ನೀಡಿತ್ತು. ಮೊಘಲ್ ರಸ್ತೆಯಲ್ಲಿ ಬೆಂಗಾವಲು ವಾಹನ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.