alex Certify ಕಳೆದು ಹೋಗಿದ್ದ ಪರ್ಸ್ ನ್ನು ಹುಡುಕಿಕೊಂಡು ಬಂದು ಹಿಂತಿರುಗಿಸಿದ ಅಪರಿಚಿತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳೆದು ಹೋಗಿದ್ದ ಪರ್ಸ್ ನ್ನು ಹುಡುಕಿಕೊಂಡು ಬಂದು ಹಿಂತಿರುಗಿಸಿದ ಅಪರಿಚಿತ…!

ನೀವು ಎಂದಾದ್ರೂ ನಿಮ್ಮ ಪರ್ಸ್ ಕಳೆದುಕೊಂಡಿದ್ದೀರಾ..? ಒಂದು ವೇಳೆ ಕಳೆದುಕೊಂಡಿದ್ದರೆ, ನೀವು ಕೇವಲ ಹಣವನ್ನು ಮಾತ್ರ ಕಳೆದುಕೊಂಡಿರುವುದಿಲ್ಲ. ಅದ್ರಲ್ಲಿ ಡ್ರೈವಿಂಗ್ ಲೈಸೆನ್ಸ್, ಡೆಬಿಟ್ ಕಾರ್ಡ್ ಮುಂತಾದ ಪ್ರಮುಖ ದಾಖಲೆಗಳಿರುತ್ತವೆ. ಅದ್ರಲ್ಲೂ ಕಳೆದುಹೋದ ವಾಲೆಟ್ ಅನ್ನು ಅಪರಿಚಿತರು ಹಿಂತಿರುಗಿಸಿದರೆ ಅದು ಪವಾಡವೇ ಸರಿ. ಇಂಥದ್ದೊಂದು ಉತ್ತಮ ಕಾರ್ಯದ ವಿಡಿಯೋ ಇದೀಗ ವೈರಲ್ ಆಗಿದೆ.

ಪಾರ್ಕಿಂಗ್ ಸೆಂಟರ್‌ನಲ್ಲಿ ಸಿಕ್ಕ ವ್ಯಾಲೆಟ್ ಅನ್ನು ಹಿಂತಿರುಗಿಸಲು ಅಪರಿಚಿತರೊಬ್ಬರು ಕಿಮ್ ಮನೆಗೆ ಭೇಟಿ ನೀಡಿದ್ದಾರೆ. ಮನೆಯೊಡತಿ ಬಾಗಿಲು ತೆರೆಯುತ್ತಿದ್ದಂತೆಯೇ, ಅಪರಿಚಿತ ವ್ಯಕ್ತಿ  ಪಾರ್ಕಿಂಗ್ ಕೇಂದ್ರದಲ್ಲಿ ಈ ಪರ್ಸ್ ಸಿಕ್ಕಿತ್ತು ಎಂದು ಆಕೆಗೆ ನೀಡುತ್ತಾನೆ.

ಬಡ ಯುವತಿಯ ಉನ್ನತ ಶಿಕ್ಷಣಕ್ಕೆ ಅಪರಿಚಿತರಿಂದ ಧನಸಹಾಯ: ಧನ್ಯವಾದ ತಿಳಿಸಿದ ವಿದ್ಯಾರ್ಥಿನಿ ಪತ್ರ ಕಂಡು ಭಾವುಕರಾದ ನೆಟ್ಟಿಗರು

ಆದರೆ ಮಹಿಳೆ ಕಿಮ್, ಇದು ತನ್ನದಲ್ಲ ಎಂದು ವಾಪಸ್ ಮಾಡುತ್ತಾಳೆ. ಆದರೆ ಆ ವ್ಯಕ್ತಿ ಪರ್ಸ್ ಒಳಗಿದ್ದ ದಾಖಲೆಗಳನ್ನು ತೆಗೆದು ತೋರಿಸಿದಾಗ, ಮಹಿಳೆಗೆ ಶಾಕ್ ಆಗುತ್ತೆ. ಅಯ್ಯೋ ದೇವರೆ ಇದು ತನ್ನ ಮಗಳದ್ದು ಎಂದು ಹೇಳುತ್ತಾಳೆ.

ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು 47,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವ್ಯಕ್ತಿಯ ಉಪಕಾರದ ವರ್ತನೆಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಜಗತ್ತಿನಲ್ಲಿ ಇನ್ನೂ ಕೂಡ ಒಳ್ಳೆಯ ವ್ಯಕ್ತಿಗಳು ಇದ್ದಾರೆ ಎಂದೆಲ್ಲಾ ಜನರು ಪ್ರತಿಕ್ರಿಯಿಸಿದ್ದಾರೆ.

https://youtu.be/ciAIGMANYf0

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...