ತೇಲುದೋಣಿಯೊಂದರಲ್ಲಿ ಸೇರಿಕೊಂಡ ಬರ್ಮೀಸ್ ಹೆಬ್ಬಾವೊಂದು ದಕ್ಷಿಣ ಫ್ಲಾರಿಡಾಗುಂಟ ಹಾಯ್ದು ಹೋದ ಘಟನೆ ಜರುಗಿದೆ. ಷಿಕಾಗೋದ ಜೋಡಿ ಸ್ಯಾಂಡಿ ಸ್ಕ್ವಿರತ್ ಹಾಗೂ ಜಿಮ್ ಹಾರ್ಟ್ ಬಳಸುವ ಈ ತೇಲುದೋಣಿಯಲ್ಲಿ ಏಳು ಅಡಿ ಉದ್ದದ ಈ ಹೆಬ್ಬಾವು ಸೇರಿಕೊಂಡಿರುವ ವಿಚಾರವು ಮಾರ್ಕೋ ದ್ವೀಪದ ರೋಸ್ ಮಾರಿನಾದಲ್ಲಿ ನಿಂತಾಗ ಜೋಡಿಯ ಅರಿವಿಗೆ ಬಂದಿದೆ.
ಹಿಂದಿನ ದಿನ ಸಾಯಂಕಾಲದ ದೋಣಿಯೊಳಗೆ ಸೇರಿಕೊಂಡಿದ್ದ ಹೆಬ್ಬಾವು ಶವರ್ ಹಿಂದೆ ಬಚ್ಚಿಕೊಂಡಿತ್ತು.
ICC ಅಚ್ಚರಿ ನಿರ್ಧಾರ: ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ: 8 ದೊಡ್ಡ ಪಂದ್ಯಾವಳಿ ಘೋಷಿಸಿದ ICC
ಹೆಬ್ಬಾವು ಕಣ್ಣಿಗೆ ಬಿದ್ದ ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಜೋಡಿ, ಅದನ್ನು ವನ್ಯಜೀವಿ ರಕ್ಷಕರ ಕೈಗೆ ಸೇರಿಸಿದ್ದಾರೆ. ಹೆಬ್ಬಾವಿನ ರಕ್ಷಣೆಗೆ ಬಂದ ಪೊಲೀಸರು ಅದನ್ನು ತಮ್ಮ ಕೈಯಲ್ಲಿ ಹಿಡಿದಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿವೆ.
ಇಲ್ಲಿನ ಎವರ್ಗ್ಲೇಡ್ ಪ್ರದೇಶದಲ್ಲಿ ಕಾಣಸಿಗುವ ಬರ್ಮೀಸ್ ಹೆಬ್ಬಾವುಗಳು ಸಾಮಾನ್ಯವಾಗಿ 6-10 ಅಡಿ ಉದ್ದವಿರುತ್ತವೆ. ಕೆಲವೊಂದು ಹಾವುಗಳು 18 ಅಡಿಯಷ್ಟು ಬೆಳೆಯುತ್ತವೆ.
ಫ್ಲಾರಿಡಾದ ದಕ್ಷಿಣ ಪ್ರದೇಶದ ಅರಣ್ಯಗಳಲ್ಲಿ ಭಾರತೀಯ ಹೆಬ್ಬಾವುಗಳು ಬರ್ಮೀಸ್ ಹೆಬ್ಬಾವುಗಳೊಂದಿಗೆ ಮಿಲನಗೊಂಡು ಈ ’ಸೂಪರ್ ಹಾವಿನ’ ಹೈಬ್ರಿಡ್ ತಳಿಗೆ ಜನ್ಮ ನೀಡಿವೆ ಎಂದು 2018ರ ಅಧ್ಯಯನವೊಂದು ತಿಳಿಸಿದೆ.