ಒಳ್ಳೆಯ ವಿದ್ಯಾಭ್ಯಾಸ ನಮ್ಮನ್ನು ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಕೊಂಡೊಯ್ಯುತ್ತೆ ಎಂದು ಹಿರಿಯರು ಹೇಳುತ್ತಲೇ ಇರ್ತಾರೆ. ಈ ಮಾತು ನೂರಕ್ಕೆ ನೂರರಷ್ಟು ಸತ್ಯ ಕೂಡ ಹೌದು. ಆದರೆ 16ನೇ ವಯಸ್ಸಿನಲ್ಲಿಯೇ ಶಾಲೆಯಿಂದ ಹೊರಗೆ ಹಾಕಲ್ಪಟ್ಟ ಪರಿಣಾಮ ಕನಿಷ್ಟ ವಿದ್ಯಾರ್ಹತೆಯನ್ನೂ ಹೊಂದಿರದ ವ್ಯಕ್ತಿಯೊಬ್ಬ ಇದೀಗ ಕೋಟ್ಯಾಧಿಪತಿಯಾಗಿದ್ದಾನೆ ಎಂದರೆ ನೀವು ನಂಬಲೇಬೇಕು..!
ಬ್ರಿಟನ್ನ ಯಾರ್ಕ್ಶೈರ್ ನಿವಾಸಿಯಾದ ಸ್ಟೀವ್ ಪಾರ್ಕಿನ್, 1992ರಲ್ಲಿ ಶಾಲೆಯನ್ನು ತ್ಯಜಿಸಿದರು. ಇದಾದ ಬಳಿಕ ಹೆವಿ ಗೂಡ್ಸ್ ಪರವಾನಿಗೆ ಪಡೆದ ಸ್ಟೀವ್ ಜೀವನೋಪಾಯಕ್ಕೆ ವಾಹನ ಚಲಾಯಿಸಲು ಆರಂಭಿಸಿದ್ರು. ಇಂದು ಸ್ಟೀವ್ ಮಾರ್ಕಿನ್ ತಮ್ಮದೇ ಲಾಜಿಸ್ಟಿಕ್ ಕಂಪನಿ ಹೊಂದಿದ್ದು ಇದರ ಮೌಲ್ಯ 450 ಕೋಟಿ ರೂಪಾಯಿ ಆಗಿದೆ.
ಯೋಧರಿಂದ ಮಹಿಳೆಯರಿಗೆ ಕಿರಿಕಿರಿ: ಟಿಎಂಸಿ ಶಾಸಕನ ವಿವಾದಾತ್ಮಕ ಹೇಳಿಕೆ
ಪಾರ್ಕಿನ್ ಪ್ರಸ್ತುತ ಯಾರ್ಕ್ಶೈರ್ನ ಶ್ರೀಮಂತರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಕೋವಿಡ್ 19ನಿಂದ ಅನೇಕರ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಆದರೂ ಸಹ ಸ್ಟೀವ್ ಪಾರ್ಕಿನ್ರ ಕ್ಲಿಪ್ಪರ್ ಕಂಪನಿ ಮಾತ್ರ ಈ ಸಂಕಷ್ಟದ ಸಮಯದಲ್ಲಿಯೂ ಲಾಭವನ್ನು ಕಂಡಿದೆ.
ಕಂಪನಿಯು ತನ್ನ ವಹಿವಾಟನಲ್ಲಿ ಶೇಕಡಾ 39.1 ಪ್ರತಿಶತ ಏರಿಕೆ ಕಂಡಿದೆ. ಈ ಕಂಪನಿಯಲ್ಲಿ ಒಟ್ಟು 10 ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.
ಕ್ಲಿಪ್ಪರ್ ಭವಿಷ್ಯದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದ ನನಗೆ ಸಾಕಷ್ಟು ಆತ್ಮವಿಶ್ವಾಸ ಕೂಡ ಇತ್ತು. ಸಂಕಷ್ಟದ ಸಮಯದಲ್ಲಿಯೂ ಅನೇಕ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಮೂಲಕ ನಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದೇವೆ. ಈ ಅವಧಿಯಲ್ಲಿ ನಾವು ನೀಡಿದ ಸೇವೆಯಿಂದಾಗಿ ಮಾರುಕಟ್ಟೆಯಲ್ಲಿ ಕ್ಲಿಪ್ಪರ್ ಪ್ರಮುಖ ಸ್ಥಾನ ಗಳಿಸಿದೆ ಎಂದಿದ್ದಾರೆ.