2021ರ ಟಿ-20 ವಿಶ್ವಕಪ್ ಈಗಾಗಲೇ ಮುಗಿದಿದೆ. ಆಗ್ಲೇ 2022 ಟಿ-20 ವಿಶ್ವಕಪ್ ದಿನಾಂಕ ಘೋಷಣೆಯಾಗಿದೆ.
ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತವರಿನ ಟಿ-20 ವಿಶ್ವಕಪ್ 2022 ನಡೆಯಲಿದೆ. ಐಸಿಸಿ ಟಿ20 ವಿಶ್ವಕಪ್ ನಡೆಯುವ ಸ್ಥಳ ಫೈನಲ್ ಮಾಡಿದ್ದು, ಫೈನಲ್ ಪಂದ್ಯ ಹಾಗೂ ಸೆಮಿಫೈನಲ್ ಪಂದ್ಯಗಳ ದಿನಾಂಕವನ್ನೂ ಪ್ರಕಟಿಸಿದೆ.
ನೂರಾರು ಮಂದಿಯ ಪ್ರಾಣ ಉಳಿಯಲು ಕಾರಣವಾಯ್ತು ಚಾಲಕನ ಸಮಯಪ್ರಜ್ಞೆ
2022 ರ ಟಿ-20 ವಿಶ್ವಕಪ್ ಅಕ್ಟೋಬರ್ 16 ರಂದು ಪ್ರಾರಂಭವಾಗಲಿದೆ. ಫೈನಲ್ ಪಂದ್ಯವು ನವೆಂಬರ್ 13 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
2022 ರ ವಿಶ್ವಕಪ್ನಲ್ಲಿ, ಒಟ್ಟು 45 ಪಂದ್ಯಗಳನ್ನು 7 ವಿವಿಧ ಸ್ಥಳಗಳಲ್ಲಿ ನಡೆಯಲಿದೆ. ಪಂದ್ಯಾವಳಿಯ ಮೊದಲ ಸೆಮಿಫೈನಲ್ ನವೆಂಬರ್ 9 ರಂದು ಸಿಡ್ನಿಯಲ್ಲಿ ಮತ್ತು ಎರಡನೇ ಸೆಮಿಫೈನಲ್ ನವೆಂಬರ್ 10 ರಂದು ಅಡಿಲೇಡ್ ಓವಲ್ನಲ್ಲಿ ನಡೆಯಲಿದೆ. ಬ್ರಿಸ್ಬೇನ್, ಹೋಬರ್ಟ್, ಪರ್ತ್ ಮತ್ತು ಕಾರ್ಡಿನಿಯಾ ಪಾರ್ಕ್ ಗೀಲಾಂಗ್ನಲ್ಲಿಯೂ ಪಂದ್ಯಗಳು ನಡೆಯಲಿವೆ. ಅಂತಿಮ ವೇಳಾಪಟ್ಟಿ ಜನವರಿ 2022 ರಲ್ಲಿ ಬಿಡುಗಡೆಯಾಗಲಿದೆ.
ಚಳಿಗಾಲಕ್ಕೆ ಈ ʼಫೇಸ್ ಮಾಸ್ಕ್ʼ ಗಳು ಬೆಸ್ಟ್
ಟಿ20 ವಿಶ್ವಕಪ್ 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಆದರೆ ಕೊರೊನಾ ಭೀತಿಯಿಂದಾಗಿ ಮುಂದೂಡಬೇಕಾಯಿತು. ಈಗ 2022ರ ಪಂದ್ಯಾವಳಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಜನವರಿಯಲ್ಲಿ ಟಿಕೆಟ್ ಮಾರಾಟ ಶುರುವಾಗಲಿದೆ.