alex Certify ತಾನು ಖರೀದಿಸಿದ್ದು 1.5 ಕೋಟಿ ರೂ. ಮೌಲ್ಯದ ವಾಚುಗಳು: ವದಂತಿ ಕುರಿತು ಹಾರ್ದಿಕ್​ ಪಾಂಡ್ಯ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾನು ಖರೀದಿಸಿದ್ದು 1.5 ಕೋಟಿ ರೂ. ಮೌಲ್ಯದ ವಾಚುಗಳು: ವದಂತಿ ಕುರಿತು ಹಾರ್ದಿಕ್​ ಪಾಂಡ್ಯ ಸ್ಪಷ್ಟನೆ

ಟೀಂ ಇಂಡಿಯಾ ಆಟಗಾರ ಹಾರ್ದಿಕ್​ ಪಾಂಡ್ಯ ಸದ್ಯ ವಾಚ್​ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಹಾರ್ದಿಕ್​ ಪಾಂಡ್ಯ ಅವರಿಂದ 5 ಕೋಟಿ ರೂಪಾಯಿ ಮೌಲ್ಯದ ವಾಚ್​ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು ಎಂಬ ಸುದ್ದಿಯು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ವಿಚಾರದ ಬಗ್ಗೆ ಸ್ವತಃ ಹಾರ್ದಿಕ್​ ಪಾಂಡ್ಯ ಸ್ಪಷ್ಟನೆ ನೀಡಿದ್ದಾರೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ: ಸರ್ಕಾರದಿಂದ ಅನರ್ಹರ ಪಟ್ಟಿ ಬಿಡುಗಡೆ – ನಿಮ್ಮ ಹೆಸರೂ ಇದರಲ್ಲಿದೆಯಾ ಎಂಬುದನ್ನು ಪರಿಶೀಲಿಸಲು ಇಲ್ಲಿದೆ ಮಾಹಿತಿ

ಐಸಿಸಿ ವರ್ಲ್ಡ್​ ಕಪ್​ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ ತಂಡದಲ್ಲಿದ್ದ ಹಾರ್ದಿಕ್​ ಪಾಂಡ್ಯ ಭಾನುವಾರ ರಾತ್ರಿ ದುಬೈನಿಂದ ಮರಳಿದ್ದರು. ಮೂಲಗಳ ಪ್ರಕಾರ ಈ ವಾಚ್​ಗಳನ್ನು ಮೊದಲೇ ಖರೀದಿ ಮಾಡಲಾಗಿತ್ತು. ಆದರೆ ಸೀರಿಯಲ್​ ಸಂಖ್ಯೆಗಳು ಹೊಂದಾಣಿಕೆ ಆಗಿರಲಿಲ್ಲ. ಹೊಸ ವಾಚುಗಳು 5 ಕೋಟಿ ರೂಪಾಯಿ ಮೌಲ್ಯದ್ದು ಎಂದು ಹೇಳಲಾಗಿತ್ತು.

ಆದರೆ ಈ ಸಂಬಂಧ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಶೇರ್​ ಮಾಡಿರುವ ಪಾಂಡ್ಯ ತಮ್ಮ ಬಳಿ ಇದ್ದ ವಾಚ್​ ತಲಾ 1.8 ಕೋಟಿ ರೂಪಾಯಿ ಹಾಗೂ 1.4 ಕೋಟಿ ರೂಪಾಯಿ ಮೌಲ್ಯದ್ದಾಗಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಪೂಜಾ ಕೋಣೆಯಲ್ಲಿ ಇವುಗಳಿದ್ದರೆ ʼಆರ್ಥಿಕʼ ಸಮೃದ್ಧಿ ನಿಶ್ಚಿತ

ಮೂಲಗಳ ಪ್ರಕಾರ ವಾಚ್​​ನ ನಿಜವಾದ ಮೊತ್ತ ಹಾಗೂ ಸರಣಿ ಸಂಖ್ಯೆಗಳನ್ನು ಹೊಂದಾಣಿಕೆಯಾಗುವಂತಹ ಬಿಲ್​ನ್ನು ಮತ್ತೊಮ್ಮೆ ಸಲ್ಲಿಸಬೇಕಿದೆ. ಅಲ್ಲದೇ ಈ ವಾಚ್​​ಗಳಿಗೆ 38 ಪ್ರತಿಶತ ಸುಂಕವನ್ನೂ ತೆರಬೇಕು. ಈ ಎಲ್ಲಾ ದಾಖಲೆಗಳನ್ನು ನೀಡಲು ಪಾಂಡ್ಯ ಯಶಸ್ವಿಯಾದಲ್ಲಿ ಮಾತ್ರ ಈ ದುಬಾರಿ ವಾಚ್​ಗಳು ಅವರ ಕೈ ಸೇರಲಿದೆ. ಇಲ್ಲವಾದಲ್ಲಿ ಅದನ್ನು ವಶಪಡಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಆದರೆ ಈ ಎಲ್ಲದರ ನಡುವೆ ಪಾಂಡ್ಯ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಒಂದನ್ನು ಶೇರ್​ ಮಾಡಿದ್ದು ತಮ್ಮ ವಾಚ್​ನ ಬೆಲೆ 5 ಕೋಟಿ ರೂಪಾಯಿ ಅಲ್ಲ. ಬದಲಾಗಿ 1.5 ಕೋಟಿ ರೂಪಾಯಿ ಎಂದು ಹೇಳಿದ್ದಾರೆ. ನಾನು ಕಾನೂನಿನ ಎಲ್ಲಾ ಕ್ರಮಗಳನ್ನು ಪಾಲಿಸಿಯೇ ದುಬೈನಲ್ಲಿ ಈ ವಾಚುಗಳನ್ನು ಖರೀದಿಸಿದ್ದೇನೆ. ಅಲ್ಲದೇ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಸುಂಕ ಪಾವತಿಗೆ ನಾನಾಗಿಯೇ ತಯಾರಾಗಿದ್ದೆ ಎಂದೂ ಸ್ಪಷ್ಟನೆ ನೀಡಿದ್ದಾರೆ.

— hardik pandya (@hardikpandya7) November 16, 2021

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...