ಮುಂಬೈ: ದೇಶದ ಪ್ರತಿಷ್ಠಿತ ಐಟಿ ಕಂಪನಿ ಟಿಸಿಎಸ್ ಉದ್ಯೋಗಿಗಳು ಕಚೇರಿಯಿಂದಲೇ ಕೆಲಸ ಮಾಡಲು ಆದೇಶಿಸಿದೆ.
ದೇಶದಲ್ಲಿ ಕೊರೊನಾ ಸೋಂಕು ಏರಿಕೆಯಾದ ಸಂದರ್ಭದಲ್ಲಿ ವರ್ಕ್ ಫ್ರಂ ಹೋಮ್ ಮಾಡಲು ಉದ್ಯೋಗಿಗಳಿಗೆ ಅವಕಾಶ ನೀಡಲಾಗಿತ್ತು. ಕೊರೋನಾ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಕಚೇರಿಯಿಂದಲೇ ಎಲ್ಲ ಉದ್ಯೋಗಿಗಳು ಕೆಲಸ ಮಾಡಲು ಆದೇಶಿಸಲಾಗಿದೆ. ಸೋಮವಾರದಿಂದಲೇ ಹೊಸ ಆದೇಶ ಜಾರಿಗೆ ಬಂದಿದೆ.
ಕಂಪನಿ ಉದ್ಯೋಗಿಗಳು ಕೋವಿಡ್ ಲಸಿಕೆ ಪಡೆದುಕೊಂಡ ಪ್ರಮಾಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವರ್ಕ್ ಫ್ರಂ ಹೋಮ್ ಸ್ಥಗಿತಗೊಳಿಸಿ ಕಚೇರಿಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ.