ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ಸ್ನೇಹಿತೆಯೊಂದಿಗೆ ಗೆಳೆಯ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲವರ ಮನಗೆದ್ದಿದೆ.
ಯುಎಸ್ನ ಇಲಿನಾಯ್ಸ್ನಲ್ಲಿರುವ ಸೆರೆಬ್ರಲ್ ಪಾಲ್ಸಿ ಹೊಂದಿರುವ ಅರೌಜೊ ಹಾಗೂ ಆಲಿವರ್ ಇಬ್ಬರೂ ಕೂಡ ಸ್ನೇಹಿತರು. ಪ್ರೌಢಶಾಲೆಯಲ್ಲಿ ಭೇಟಿಯಾದ ಇವರು ಮತ್ತಷ್ಟು ಆತ್ಮೀಯರಾಗಿದ್ದಾರೆ.
ಕೃಷಿ ಮೇಳದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾದ ‘ಕೃಷ್ಣ’ : ಬರೋಬ್ಬರಿ 1 ಕೋಟಿ ರೂ. ಬೆಲೆಬಾಳುವ ಈ ಗೂಳಿಯ ವೀರ್ಯಕ್ಕೆ ಈಗ ಬಲು ಬೇಡಿಕೆ
ಇದೀಗ, ಪ್ರಾಮ್ನಲ್ಲಿ ಆತ್ಮೀಯ ಸ್ನೇಹಿತರ ಜೋಡಿ ಒಟ್ಟಿಗೆ ನೃತ್ಯ ಮಾಡುತ್ತಿರುವ ಹೃದಯಸ್ಪರ್ಶಿ ವಿಡಿಯೊ ವೈರಲ್ ಆಗಿದ್ದು, ಹಲವರ ಹೃದಯಗಳನ್ನು ಗೆದ್ದಿದೆ. ಈ ವಿಡಿಯೋ 2017ರದ್ದಾದರೂ, ಮತ್ತೆ ವೈರಲ್ ಆಗಿದೆ.
ಸೆರೆಬ್ರಲ್ ಪಾಲ್ಸಿ ಎನ್ನುವುದು ಮಿದುಳಿನ ಗಾಯದಿಂದಾಗಿ ದೇಹದ ಚಲನೆಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಶಾಶ್ವತ ಅಂಗವೈಕಲ್ಯವಾಗಿದೆ. ಸೆರೆಬ್ರಲ್ ಪಾಲ್ಸಿ ಹೊಂದಿರುವ ವ್ಯಕ್ತಿಯು ಮಾತು, ಸಮತೋಲನ, ದೃಷ್ಟಿ ಮತ್ತು ಶ್ರವಣದ ದುರ್ಬಲತೆಯನ್ನು ಕೂಡ ಹೊಂದಿರುತ್ತಾರೆ.
ಆದರೆ, ಸ್ನೇಹಿತರು ಮತ್ತು ಪ್ರೀತಿ ಪಾತ್ರರ ಸ್ವಲ್ಪ ಸಹಾಯದಿಂದ, ಸೆರೆಬ್ರಲ್ ಪಾಲ್ಸಿ ಹೊಂದಿರುವ ಜನರು ಅವರು ಇಷ್ಟಪಡುವ ಕೆಲಸಗಳನ್ನು ಮಾಡಬಹುದಾಗಿದೆ.
https://twitter.com/buitengebieden_/status/1459854822048514057?ref_src=twsrc%5Etfw%7Ctwcamp%5Etweetembed%7Ctwterm%5E1459854822048514057%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fteenager-takes-his-best-friend-with-cerebral-palsy-to-prom-video-wins-hearts-watch%2F832007