ಮೊಳಕೆ ಕಾಳನ್ನು ಮಾರಿ ತಮ್ಮ ಅಂತ್ಯಕ್ರಿಯೆಗಾಗಿ ಹಣ ಕೂಡಿಟ್ಟಿದ್ದ ವೃದ್ಧನ ಉಳಿತಾಯದ ಮೊತ್ತವನ್ನು ಕಳ್ಳರು ಲೂಟಿ ಮಾಡಿದ್ದು ಗಮನಕ್ಕೆ ಬರುತ್ತಿದ್ದಂತೆಯೇ ಶ್ರೀನಗರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕೈನಿಂದ ಹಣ ನೀಡುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದಾರೆ.
ರಸ್ತೆ ಬದಿಯಲ್ಲಿ ಕಡಲೆಕಾಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಅಬ್ದುಲ್ ರೆಹಮಾನ್ರ ಉಳಿತಾಯದ ಹಣವನ್ನು ಕಳ್ಳರು ಲೂಟಿ ಮಾಡಿದ್ದರು. ಅವರು ತಮ್ಮ ಅಂತ್ಯಕ್ರಿಯೆಗಾಗಿ ಹಣ ಕೂಡಿಟ್ಟಿದ್ದರು ಎನ್ನಲಾಗಿದೆ .
ರೆಹಮಾನ್ಗೆ ಥಳಿಸಿದ ಕಳ್ಳರು, 1 ಲಕ್ಷ ರೂಪಾಯಿ ಮೌಲ್ಯದ ಹಣವನ್ನು ಕದ್ದು ಪರಾರಿಯಾಗಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಸಂದೀಪ್ ಚೌಧರಿ ವೃದ್ಧನ ನೆರವಿಗೆ ಧಾವಿಸಿದ್ದಾರೆ.
ಪೊಲೀಸ್ ಅಧಿಕಾರಿ, ರೆಹಮಾನ್ಗೆ ತಮ್ಮ ಕೈನಿಂದ 1 ಲಕ್ಷ ರೂಪಾಯಿ ಹಣವನ್ನು ನೀಡಿದ್ದಾರೆ. ಇದರಿಂದ ವೃದ್ಧನ ಮುಖದಲ್ಲಿ ನಗು ಮೂಡಿದೆ. ಸಂದೀಪ್ರ ಈ ಮಾನವೀಯ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗ್ತಿದೆ.