ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಬಳಿಕ ಪರಿಸ್ಥಿತಿ ನರಕ ಸದೃಶವಾಗಿದೆ. ಈ ವಿಚಾರವಾಗಿ ಕಳವಳ ವ್ಯಕ್ತಪಡಿಸಿದ ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕಿ ಹೆನ್ರಿಯೆಟ್ಟಾ ಫೋರ್, ಯುದ್ಧ ಪೀಡಿತ ಅಫ್ಘಾನಿಸ್ತಾನದಲ್ಲಿ ವರದಕ್ಷಿಣೆಗೆ ಪ್ರತಿಯಾಗಿ ಭವಿಷ್ಯದ ಮದುವೆಗೆಂದು 20 ದಿನದ ಹೆಣ್ಣು ಮಕ್ಕಳನ್ನೇ ನೀಡಲಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ರು.
2018 ಹಾಗೂ 2019ರ ಅವಧಿಯಲ್ಲಿ 183 ಬಾಲ್ಯ ವಿವಾಹ ಹಾಗೂ 10 ಮಕ್ಕಳ ಮಾರಾಟದ ಪ್ರಕರಣಗಳನ್ನು ಹೆರಾತ್ ಹಾಗೂ ಬಾಗ್ದಿಸ್ನಲ್ಲಿ ಯುನಿಸೆಫ್ ದಾಖಲಿಸಿದೆ. ಬಾಲ್ಯ ವಿವಾಹವಾದ ಮಕ್ಕಳು 6 ತಿಂಗಳಿನಿಂದ 17 ವರ್ಷ ಪ್ರಾಯದೊಳಗಿನವರು ಎಂದು ವರದಿಯಾಗಿದೆ.
ಏರ್ಟೆಲ್ ನ ಈ ಯೋಜನೆ ಗ್ರಾಹಕರಿಗೆ ಪ್ರತಿ ದಿನ ಉಚಿತವಾಗಿ ಸಿಗಲಿದೆ 500ಎಂಬಿ ಡೇಟಾ
ಅಫ್ಘಾನಿಸ್ತಾನದಲ್ಲಿ ಬಾಲ್ಯ ವಿವಾಹದಂತಹ ಪ್ರಕರಣಗಳು ಹೆಚ್ಚುತ್ತಿರೋದು ಕಳವಳಕಾರಿಯಾಗಿದೆ. ವರದಕ್ಷಿಣೆಗೆ ಬದಲಾಗಿ 20 ತಿಂಗಳ ಮಕ್ಕಳನ್ನು ಮಾರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಹಾರದ ಕೊರತೆ, ಕೋವಿಡ್ ಸ್ಥಿತಿ, ನಿರುದ್ಯೋಗತನ, ಸರ್ಕಾರ ಬದಲಾವಣೆ ಈ ಎಲ್ಲಾ ಕಾರಣಗಳಿಂದ ಅಫ್ಘನ್ ಜನರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೆನ್ರಿಯೆಟ್ಟಾ ಹೇಳಿದ್ರು.
ಕಳೆದ ವರ್ಷದಿಂದ ಅಫ್ಘನ್ನಲ್ಲಿ ಅರ್ಧದಷ್ಟು ಜನರಿಗೆ ಶುದ್ಧ ನೀರು, ಆಹಾರಗಳಂತಹ ತುರ್ತು ವಸ್ತುಗಳೇ ಸಿಗುತ್ತಿಲ್ಲ. ಅಫ್ಘಾನಿಸ್ತಾನದಲ್ಲಿ ಅರ್ಥ ವ್ಯವಸ್ಥೆ ಹೀನಾಯವಾಗಿ ಕುಸಿದಿರೋದ್ರಿಂದ ಅಲ್ಲಿನ ಜನತೆ ಕಡುಬಡತನವನ್ನು ಎದುರಿಸುತ್ತಿದ್ದಾರೆ. ಇದರಿಂದ ಬಾಲ ಕಾರ್ಮಿಕ ಪದ್ಧತಿ ಹಾಗೂ ಬಾಲ್ಯ ವಿವಾಹ ಪ್ರಮಾಣ ದಿನದಿಂದ ದಿನಕ್ಕೆ ಮಿತಿ ಮೀರಿದೆ ಎಂದು ಹೇಳಿದ್ರು.