ಕೊಲೆ ಪ್ರಕರಣವೊಂದು ಸಾಬೀತಾಗಿ 2016ರಲ್ಲಿ ಜೈಲು ಸೇರಿದ್ದ ವ್ಯಕ್ತಿಯೊಬ್ಬ ಕಳೆದ ತಿಂಗಳಷ್ಟೇ ಜೈಲಿನಿಂದ ಹೊರಬಂದಿದ್ದ. ಆದರೆ ಅಷ್ಟರಲ್ಲಾಗಲೇ ಮುಂಬೈನಲ್ಲಿ ಮತ್ತೊಬ್ಬ ಮಹಿಳೆಯನ್ನು ಕೊಲೆಗೈದ ಬೆಚ್ಚಿ ಬೀಳಿಸುವ ಘಟನೆ ಮುಂಬೈನಲ್ಲಿ ನಡೆದಿದೆ.
ಆರೋಪಿ 40 ವರ್ಷದ ಸಾಗರ್ ಯಾದವ್ 2016ರಲ್ಲಿ ಮುಂಬೈನ ವಶಿ ಎಂಬಲ್ಲಿ ಮಹಿಳೆಯನ್ನು ಕೊಲೆಗೈದು ಜೈಲುಪಾಲಾಗಿದ್ದ. ಒಂದು ತಿಂಗಳ ಹಿಂದಷ್ಟೇ ಈತನನ್ನು ಜೈಲಿನಿಂದ ರಿಲೀಸ್ ಮಾಡಲಾಗಿತ್ತು.
ಮೃತ ಮಹಿಳೆಯನ್ನು ಶೋಭಾ ಸೋನಿ ಎಂದು ಗುರುತಿಸಲಾಗಿದೆ. 40 ವರ್ಷದ ಸಾಗರ್ ಯಾದವ್, ಶೋಭಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಲ್ಲದೇ ತಲೆಯನ್ನು ಕಲ್ಲಿನಿಂದ ಜಜ್ಜಿದ್ದಾನೆ. ಮೃತದೇಹವನ್ನು ವಶ ಪಡೆಯುವ ವೇಳೆ ಆಕೆಯ ಕೈ ಕಾಲುಗಳನ್ನು ಬೆಲ್ಟ್ನಿಂದ ಕಟ್ಟಿ ಹಾಕಲಾಗಿತ್ತು ಹಾಗೂ ಆಕೆಯ ಬಟ್ಟೆ ಅಸ್ತವ್ಯಸ್ತವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಿಳೆಯೊಬ್ಬಾಕೆಯ ಕೈಕಾಲುಗಳನ್ನು ಬೆಲ್ಟ್ನಿಂದ ಕಟ್ಟಿ ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಿದ ಹಾಕಿದ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಕತ್ತು ಹಿಸುಕಿ ಕೊಲೆಗೈಯಲಾಗಿದೆ ಎಂದು ತಿಳಿದುಬಂತು. ಮೃತಪಟ್ಟ ಮಹಿಳೆಯನ್ನು 52 ವರ್ಷದ ಶೋಭಾ ಸೋನಿ ಎಂದು ಗುರುತಿಸಲಾಗಿದೆ. ಹಾಗೂ ಆಕೆ ಚಿಂದಿ ಆಯುವವಳಾಗಿದ್ದಳು ಎಂದು ಪೊಲೀಸರು ಅಧಿಕೃತ ಮಾಹಿತಿ ನೀಡಿದ್ದಾರೆ.
ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದ ಶೋಭಾ ಜೊತೆ ಕುಟುಂಬಸ್ಥರು ಸಂಬಂಧ ಕಡಿದುಕೊಂಡಿದ್ದರು. ಬಳಿಕ ಶೋಭಾ ತನ್ನ ಪತಿಯಿಂದಲೂ ದೂರವಾಗಿದ್ದಳು. ಕೋವಿಡ್ ಸಂದರ್ಭದಲ್ಲಿ ಶೋಭಾ ಕೆಲಸ ಕಳೆದುಕೊಂಡಿದ್ದರು. ಹೀಗಾಗಿ ಶೋಭಾ ಜೀವನ ನಡೆಸಲು ಭಿಕ್ಷೆ ಬೇಡುತ್ತಿದ್ದಳು ಎನ್ನಲಾಗಿದೆ.
ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಯಾದವ್ನನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಆತ ಆಕೆ ಹಾಗೂ ಆಕೆಯ ಪತಿ 2011ರಲ್ಲಿ ನನ್ನನ್ನು ಲೂಟಿ ಮಾಡಿದ್ದರು. ಹೀಗಾಗಿ ಸೇಡು ತೀರಿಸಿಕೊಳ್ಳಲು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾನೆ.