ಬೆಳಗಾವಿ: ಕಂಟ್ರಿ ಮೇಡ್ ಪಿಸ್ತೂಲನ್ನು ಮಾರಾಟ ಮಾಡುತ್ತಿದ್ದ 8 ಜನರ ಗ್ಯಾಂಗ್ ಒಂದನ್ನು ಬೆಳಗಾವಿ ಜಿಲ್ಲೆ ಖಾನಾಪುರ ಪೊಲೀಸರು ಬಂಧಿಸಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಪಿಸ್ತೂಲ್ ಟ್ರೇನಿಂಗ್ ನೀಡಿದ ಪ್ರದೇಶವನ್ನೇ ಅಡ್ಡಾ ಮಾಡಿಕೊಂಡು ಈ ಗ್ಯಾಂಗ್ ಕಾರ್ಯ ನಿರ್ವಹಿಸುತ್ತಿತ್ತು. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಉಚಗಾಂವ್ ಕ್ರಾಸ್ ಬಳಿ ಖದೀಮರು ರೆಡ್ ಹ್ಯಾಂಡ್ ಆಗಿ ಪೊಲಿಸರ ಬಲೆಗೆ ಬಿದ್ದಿದ್ದಾರೆ. ಎರಡು ಕಂಟ್ರಿ ಮೇಡ್ ಪಿಸ್ತೂಲ್ ಹಾಗೂ ಮೂರು ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
BIG NEWS: ಬಿರುಗಾಳಿ ಎಬ್ಬಿಸಿದ ಬಿಟ್ ಕಾಯಿನ್ ಕೇಸ್ ದಾಖಲೆ ಬಿಡುಗಡೆ ಶೀಘ್ರ
ಮಹಾರಾಷ್ಟ್ರದ ತುಳಸಿದಾಸ್ ಜೋಷಿ, ನಾರಾಯಣ ಪಾಟೀಲ್ ಎಂಬುವವರು ಪಿಸ್ತೂಲ್ ಮಾರಾಟ ಮಾಡುತ್ತಿದ್ದರು. ಗದಗ ಜಿಲ್ಲೆ ಅಣ್ಣಿಗೇರಿಯ ರೌಡಿ ಶೀಟರ್ ಉಮೇಶ್ ಬೆಳೆಗೇರಿಗೆ ಪಿಸ್ತೂಲ್ ಮಾರಾಟ ಮಾಡುವ ವೇಳೆ ಈ ಗ್ಯಾಂಗ್ ಸಿಕ್ಕಿಬಿದ್ದಿದೆ.
ಮೂವರು ಮಹಾರಾಷ್ಟ್ರ ಮೂಲದ ಆರೋಪಿಗಳು, ಓರ್ವ ಮಧ್ಯಪ್ರದೇಶ ಹಾಗೂ ನಾಲ್ಕು ಜನರು ಕರ್ನಾಟಕ ಮೂಲದ ಸೇರಿ ಒಟ್ಟು 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.