ನವದೆಹಲಿ: ಆದಾಯ ತೆರಿಗೆ ಪಾವತಿದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ತೆರಿಗೆ ಇಲಾಖೆ ವೆಬ್ಸೈಟ್ ನಲ್ಲಿ ತೆರಿಗೆ ಪಾವತಿದಾರರ ಹಣಕಾಸು ವ್ಯವಹಾರಗಳ ವಾರ್ಷಿಕ ಮಾಹಿತಿ ಸ್ಟೇಟ್ಮೆಂಟ್ ನೀಡುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ.
ತೆರಿಗೆದಾರರಿಗೆ ಆಯಾ ವರ್ಷ ಬೇರೆ ಬೇರೆ ಮೂಲಗಳಿಂದ ಲಭಿಸಿದ ಬಡ್ಡಿ, ಡಿವಿಡೆಂಡ್, ಷೇರು ಆದಾಯ, ಮ್ಯೂಚುವಲ್ ಫಂಡ್ ವ್ಯವಹಾರ, ವಿದೇಶಿ ಹಣ ವರ್ಗಾವಣೆ, ಇನ್ಕಮ್ ಟ್ಯಾಕ್ಸ್ ಗೆ ಬಂದ ಬಡ್ಲಿ ಮೊದಲಾದ ಎಲ್ಲ ಮಾಹಿತಿಗಳು ಸ್ಟೇಟ್ಮೆಂಟ್ ನಲ್ಲಿರಲಿವೆ.
ತೆರಿಗೆ ತೆರಿಗೆ ವೆಬ್ ಸೈಟಿನ 26 ಎಎಸ್ ಫಾರ್ಮ್ ನಲ್ಲಿ ವಾರ್ಷಿಕ ವ್ಯವಹಾರದ ಕೆಲವು ಮಾಹಿತಿಗಳು ಮಾತ್ರ ಇರುತ್ತಿದ್ದವು. ಇನ್ನುಮುಂದೆ ಹಣಕಾಸು ವ್ಯವಹಾರಗಳ ವಾರ್ಷಿಕ ಸ್ಟೇಟ್ ಮೆಂಟ್ ಮಾಹಿತಿ ನೀಡುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ ಎಂದು ಹೇಳಲಾಗಿದೆ.