alex Certify 13,175 ಅಡಿ ಎತ್ತರದಲ್ಲಿ ಏರ್ ಬಲೂನ್‌ ನಲ್ಲಿ ನಿಂತು ಫ್ರೆಂಚ್ ವ್ಯಕ್ತಿಯಿಂದ ವಿಶ್ವದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

13,175 ಅಡಿ ಎತ್ತರದಲ್ಲಿ ಏರ್ ಬಲೂನ್‌ ನಲ್ಲಿ ನಿಂತು ಫ್ರೆಂಚ್ ವ್ಯಕ್ತಿಯಿಂದ ವಿಶ್ವದಾಖಲೆ

ಚಾಟೆಲೆರಾಲ್ಟ್: ಫ್ರೆಂಚ್ ವ್ಯಕ್ತಿಯೊಬ್ಬರು 13,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಏರ್ ಬಲೂನ್ ಮೇಲೆ ನಿಂತು ವಿಶ್ವದಾಖಲೆ ಬರೆದಿದ್ದಾರೆ. ಅವರು ದೇಣಿಗೆಗಾಗಿ ಹಣವನ್ನು ಸಂಗ್ರಹಿಸುವುದಕ್ಕಾಗಿ ಈ ಸಾಹಸ ಮಾಡಿದ್ದಾರೆ.

28 ರ ಹರೆಯದ ರೆಮಿ ಓವ್ರಾರ್ಡ್ ಅವರು ಭೂಮಿಯಿಂದ 3,637 ಮೀಟರ್ (11,932 ಅಡಿ) ಎತ್ತರದಲ್ಲಿರುವಾಗ ಹಾಟ್ ಏರ್ ಬಲೂನ್ ಮೇಲೆ ನಿಂತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಈ ಎತ್ತರವು ಫ್ರಾನ್ಸ್‌ನ ವಾರ್ಷಿಕ ಚಾರಿಟಿ ಅಭಿಯಾನದ ಟೆಲಿಥಾನ್‌ನ ಫೋನ್ ಸಂಖ್ಯೆಯನ್ನು (36-37) ಪ್ರತಿನಿಧಿಸುತ್ತದೆ. ಪಶ್ಚಿಮ ಫ್ರಾನ್ಸ್‌ನಲ್ಲಿ ಚಾಟೆಲ್‌ರಾಲ್ಟ್‌ನ ಮೇಲೆ ಬಲೂನ್ 13,175 ಅಡಿಗಳಷ್ಟು ಎತ್ತರಕ್ಕೆ ಏರಿದೆ.

ಹಾಟ್ ಏರ್ ಬಲೂನ್ ಮೇಲಿನ ಸವಾರಿಯು ಓವ್ರಾರ್ಡ್ ಅವರ ಹಿಂದಿನ 3,992 ಅಡಿ ವಿಶ್ವ ದಾಖಲೆಯನ್ನು ಮುರಿದಿದೆ. ಸುಮಾರು 90 ನಿಮಿಷಗಳ ಕಾಲ ಅವರು ಏರ್ ಬಲೂನ್ ಮೇಲೆ ಸವಾರಿ ಮಾಡಿದ್ದರೆ, ಓವ್ರಾರ್ಡ್ ಅವರ ತಂದೆ ಅದನ್ನು ನಿರ್ವಹಿಸಿದ್ದಾರೆ.

ಓವ್ರಾರ್ಡ್ ಅವರು ತಮ್ಮ ಸಾಹಸಮಯ ಸವಾರಿಯನ್ನು ಫೇಸ್‌ಬುಕ್‌ನಲ್ಲಿ ಸೆಲ್ಫಿ ಸ್ಟಿಕ್ ಬಳಸಿ ಹಾರಾಟದ ಆರಂಭಿಕ ಹಂತದಲ್ಲಿ ಲೈವ್-ಸ್ಟ್ರೀಮ್ ಕೂಡ ಮಾಡಿದ್ದಾರೆ.

ನಾನು ಥಾಮಸ್ ಪೆಸ್ಕ್ವೆಟ್ ಅನ್ನು ಬದಲಿಸಲು ಸಾಧ್ಯವಾಗಲಿಲ್ಲ, ಆದರೆ ನಾನು ಅವರು ಬಾಹ್ಯಾಕಾಶದಲ್ಲಿದ್ದ ಸ್ಥಳಕ್ಕೆ ಸ್ವಲ್ಪ ಹತ್ತಿರವಾಗಲು ಪ್ರಯತ್ನಿಸುತ್ತೇನೆ ಎಂದು ಓವ್ರಾರ್ಡ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳ ಕಾಲ ಕಳೆದ ನಂತರ ಈ ತಿಂಗಳ ಆರಂಭದಲ್ಲಿ ಫ್ರೆಂಚ್ ಗಗನಯಾತ್ರಿ ಥಾಮಸ್ ಪೆಸ್ಕ್ವೆಟ್‌ ಅವರು ಭೂಮಿಗೆ ಮರಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...